Ad Widget

ಮಡಪ್ಪಾಡಿ : ಶ್ರೀ ರಾಮ ಭಜನಾ ಮಂಡಳಿ ವತಿಯಿಂದ 200 ನೇ ವಾರದ ಭಜನಾ ಕಾರ್ಯಕ್ರಮ

ಮಡಪ್ಪಾಡಿ: ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ ಇದರ ವತಿಯಿಂದ ಪ್ರತಿ ವರ್ಷ ದಂತೆ ಈ ವರ್ಷ ಕೂಡ ನವರಾತ್ರಿ ಉತ್ಸವದ ಪ್ರಯುಕ್ತ 9 ದಿನಗಳ ಭಜನಾ ಕಾರ್ಯಕ್ರಮದ ಅಂಗವಾಗಿ ಅ.15 ರಂದು ಕೊನೆಯ ದಿನದ ಭಜನಾ ಕಾರ್ಯಕ್ರಮ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ಶ್ರೀ ರಾಮ ಭಜನಾ ಮಂಡಳಿಯು ಪ್ರತಿ ಶುಕ್ರವಾರ ಎಲ್ಲಾ ಸದಸ್ಯರು,ಊರಿನ ಭಗವಧ್ಭಕ್ತರು ಸೇರಿ ಭಜನೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಭಜನಾ ಮಂಡಳಿಯು ಕೊವಿಡ್ ಮಾರ್ಗ ಸೂಚಿ ಹೊರತು ಪಡಿಸಿ ಸತತ 200 ನೇ ವಾರದ ಭಜನೆಯ ಉತ್ಸವ ಹಾಗೂ ನವರಾತ್ರಿ ಉತ್ಸವ, ಭಜನಾ ಕಾರ್ಯಕ್ರಮ ನಡೆಯಿತು. ಶ್ರೀದೇವಿ ಭಜನಾ ಮಂಡಳಿ ದೇವ-ಕಂದ್ರಪ್ಪಾಡಿ ಇವರು ಭಜನಾ ಕಾರ್ಯಕ್ರಮವನ್ನು ಇಂದು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರುಗಳು, ಯುವಕ ಮಂಡಲ ಮಡಪ್ಪಾಡಿ ಹಾಗೂ ಜಂಟಿ ಸಂಘ ಸಂಸ್ಥೆಗಳ,ಅಧ್ಯಕ್ಷರು,ಸರ್ವ ಸದಸ್ಯರುಗಳು, ಊರಿನ ಭಗವಧ್ಭಕ್ತರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading