
ಮಿತ್ರ ಮಂಡಲ ನಾಗತೀರ್ಥ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ.7 ರಂದು ದೀಪಾವಳಿ ಕಪ್ ಕ್ರಿಕೆಟ್ ಪಂದ್ಯಾಟ ನಡೆಸುವ ಬಗ್ಗೆ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಿತ್ರ ಮಂಡಲ ನಾಗತೀರ್ಥ ಇದರ ಅದ್ಯಕ್ಷ ನಿತಿನ್ ಕುಮಾರ್ ನಾಗತೀರ್ಥ ಕಾರ್ಯದರ್ಶಿ ನವೀನ್ ನಾಗತೀರ್ಥ, ಕ್ರೀಡಾ ಕಾರ್ಯದರ್ಶಿ ಹರ್ಷಿತ್ ಸಂಪ, ಮಿತ್ರ ಮಂಡಲದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶರತ್ ಕುದ್ವ ಉಪಸ್ಥಿತರಿದ್ದರು. ಯತೀಶ್ ನಾಗತೀರ್ಥ ಸ್ವಾಗತಿಸಿ, ನವೀನ್ ನಾಗತೀರ್ಥ ವಂದಿಸಿದರು.