ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಕೊಡಮಾಡುವ ರಾಷ್ಟ್ರ ಮಟ್ಟದ ವಿದ್ಯಾ ವಿಭೂಷಣ ಪ್ರಶಸ್ತಿಗೆ ಈ ವರ್ಷ ರಾಜ್ಯ ಮಟ್ಟದ ತರಬೇತುದಾರ ಕೆ.ಎಂ.ಇಕ್ಬಾಲ್ ಬಾಳಿಲರವರು ಆಯ್ಕೆ ಗೊಂಡಿರುತ್ತಾರೆ.
ಆಯ್ಕೆ ಘೋಷಣೆ ಮತ್ತು ಪಶಸ್ತಿ ಪತ್ರವನ್ನು ಅಕ್ಟೋಬರ್ 10ರಂದು ಗೂಗುಲ್ ಮೀಟ್ ಮೂಲಕ ನಡೆಸಲಾಗಿದ್ದು ಕೋವಿಡ್ ಸಂಪೂರ್ಣ ಮುಕ್ತಿಗೊಂಡ ಬಳಿಕ ಅಂತಾರಾಷ್ಟ್ರೀಯ ಸಮ್ಮೇಳದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡುವುದಾಗಿ ಸಂಘಟಕರು ತಿಳಿಸಿದ್ದಾರೆ.
ಶೈಕ್ಷಣಿಕ ರಂಗದಲ್ಲಿ ತರಬೇತಿಗಳನ್ನು ನೀಡಿ ವಿದ್ಯಾ ರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಮತ್ತು
ಭಾಷಣದ ಮೂಲಕ ಸೌಹಾರ್ದತೆಯ ನಾಡನ್ನು ಕಟ್ಟಲು ಪ್ರೇರಣೆ ನೀಡುವ ಇವರ ಸೇವೆಯನ್ನು ಪರಿಗಣಿಸಿ
ವಿದ್ಯಾ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ಎಲ್ ಎಚ್ ಪೆಂಡಾರಿ ಕವಿತ್ತ ಕರ್ಮಮಣಿ, ಉಪಾಧ್ಯಕ್ಷ ಚಂದ್ರಶೇಖರ್ ಹೀರೆಮಠ್, ಡಾಕ್ಟರ್ ರಾಧಾ ಕುಲಕರ್ಣಿ, ತೀರ್ಪುಗಾರಾದ ಅಮೇರಿಕಾ ಲಾರೆನ್ ಮೇರಿ ಲ್ಯಾಂಡ್ ಸಾಹಿತಿ ಫಣಿಶ್ರೀ ನಾರಯಣ, ಯಶೋಧ ಭಟ್, ಡಾಕ್ಟರ್ ಗುರುಸಿದಯ್ಯಾ ಸ್ವಾಮಿ ಆಯ್ಕೆ ಪತ್ರದ ಮೂಲಕ ತಿಳಿಸಿದ್ದಾರೆ.
ಇಕ್ಬಾಲ್ ಬಾಳಿಲ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ನಿವಾಸಿಯಾಗಿದ್ದು ಹಲವಾರು ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳ ಮೂಲಕ ಸೇವೆಗಳನ್ನು ನಿರ್ವಹಿಸಿದ ಬಹುಮುಖ ಪ್ರತಿಭೆಯಾಗಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ, ದಕ್ಷಿಣ ಭಾರತದ ಅತ್ಯುನ್ನತ ಸಂಘಟನೆಯಾಗಿರುವ ಎಸ್ಕೆ ಎಸ್ ಎಸ್ ಎಫ್ ಟ್ರೆಂಡ್ ಕೇಂದ್ರ ಸಮಿತಿ ಸದಸ್ಯರಾಗಿ, ರಾಜ್ಯ ತರಬೇತುದಾರರಾಗಿ, ಎಸ್ಕೆ ಎಸ್ ಎಸ್ ಎಫ್ ಜಿಲ್ಲಾ ಕಾರ್ಯದರ್ಶಿಯಾಗಿ, ಮಾನವರು ಸಹೋದರರು ಸೌಹಾರ್ದ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಮಾನವ ಹಕ್ಕುಗಳ ಒಕ್ಕೂಟ ರಾಜ್ಯ ಕೌನ್ಸಿಲರಾಗಿ, ಸೆಕ್ಯುಲರ್ ಯೂತ್ ಫಾರಂ ನಿರ್ದೇಶಕರಾಗಿ, ಕರುನಾಡು ಸಾಹಿತ್ಯ ವೇದಿಕೆ ಉಪಾಧ್ಯಕ್ಷರಾಗಿ, ಹೀಗೆ ಹತ್ತಾರು ಸಂಘ ಸಂಸ್ಥೆಯ ಮೂಲಕ ಸೇವೆಯನ್ನು ನಿರ್ವಹಿಸುತ್ತಿದ್ದಾರೆ.
ಶಾಲಾ ಕಾಲೇಜು ವಿದ್ಯಾ ರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ತರಬೇತಿ, ಹೆತ್ತವರ ಸೆಮಿನಾರ್, ಮಾದಕ ವ್ಯಸನ ಮುಕ್ತ ಸಮಾಜ ತರಬೇತಿಯ ಮೂಲಕ ಗಮನ ಸೆಳೆದಿದ್ದಾರೆ.
ಇವರು ಉತ್ತಮ ವಾಗ್ಮಿಯಾಗಿದ್ದು ಹೆಚ್ಚು ಸೌಹಾರ್ದತೆಯ ಭಾಷಣಕ್ಕೆ ಒತ್ತು ನೀಡುತ್ತಾರೆ. ಇತ್ತೀಚೆಗೆ ಆದಿಚುಂಚನಗಿರಿ ಮಠದಲ್ಲಿ ಮುಸ್ಲಿಂ ಪ್ರತಿನಿಧಿಯಾಗಿ ಭಾಗವಹಿಸಿ ಮಾತನಾಡಿದ ಸೌಹಾರ್ದ ಭಾಷಣನವೂ ರಾಜ್ಯಾದ್ಯಂತ ಮನೆ ಮಾತಾಗಿತ್ತು.