ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ಮಾರ್ಗದರ್ಶನದಂತೆ ಪೂರ್ವ ಸಂಪ್ರದಾಯದಂತೆ ನಡೆಸಿಕೊಂಡು ಬಂದಿರುವ ನವರಾತ್ರಿ ಉತ್ಸವ ನಡೆಯುತ್ತಿದ್ದು
ದೇವಾಲಯದ ಅರ್ಚಕರಾದ ಶ್ರೀ ಕೇಶವ ಪೂದೆನ್ನಾಯರವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು.
ಆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನವರಾತ್ರಿ ಉತ್ಸವವು ಅ.14ರವರೆಗೆ ನಡೆಯಲಿದ್ದು, ಆ ದಿನ ಆಯುಧಪೂಜೆ ಹಾಗೂ ವಾಹನಪೂಜೆ ನಡೆಯಲಿದೆ. ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ. ಅ.15ರಂದು ಗಣಹೋಮ, ಸೀಯಾಳಾಭಿಷೇಕ, ಅಕ್ಷರಾಭ್ಯಾಸ, ಮಹಾಸಂಪ್ರೋಕ್ಷಣೆ ನಡೆಯಲಿದೆ ಎಂದು ಆಡಳಿತಾಧಿಕಾರಿ ಬಸವರಾಜು.ಬಿ ತಿಳಿಸಿದ್ದಾರೆ.