
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18 ಪೇಟೆ ದೇವಸ್ಥಾನಗಳಿಗೊಳಪಟ್ಟ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ‘ಶ್ರೀ ನವರಾತ್ರಿ ಮಹೋತ್ಸವಗಳು’ ಅ.07ನೇ ಗುರುವಾರದಂದು ಪ್ರಾರಂಭಗೊಂಡಿದ್ದು ಬೆಳಿಗ್ಗೆ ದೀಪೋಜ್ವಲನ ನೆರವೇರಿತು.

ಅ.08ರಂದು ಮಧ್ಯಾಹ್ನ ದೇವಸ್ಥಾನದ ಉಭಯ ದೇವರಿಗೆ ಮಹಾಪೂಜೆ ನಡೆಯಿತು. ಬಳಿಕ ಭೂರಿಭೋಜನ ನಡೆಯಿತು.


ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಮೊಕ್ತೇಸರರಾದ ಯಂ. ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ. ಸುರೇಶ್ ಶೆಣೈ, ಬಿ. ಕೃಷ್ಣ ಪೈ, ಬಿ. ಅಶೋಕ ಪೈ, ಬಿ.ಮಿಥುನ್ ಶೆಣೈ, ಬಿ. ಸುದರ್ಶನ ಮಲ್ಯ, ಬೆಳ್ಳಾರೆ ಗೌಡ ಸಾರಸ್ವತ ಬ್ರಾಹ್ಮಣ ಯುವಕ ವೃಂದದ ಅಧ್ಯಕ್ಷರಾದ ಯಂ. ರಾಜೇಶ್ ಶ್ಯಾನುಭಾಗ್ ಮತ್ತು ಸದಸ್ಯರು, ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ನವರಾತ್ರಿ ಮಹೋತ್ಸವ ಅ.14ನೇ ಗುರುವಾರದವರೆಗೆ ವಿಜೃಂಭಣೆಯಿಂದ ಜರುಗಲಿದ್ದು
ಪ್ರತಿನಿತ್ಯ ಮಧ್ಯಾಹ್ನ ಗಂಟೆ 12.00ರಿಂದ ಉಭಯ ದೇವರಿಗೆ ಮಹಾಪೂಜೆ, ಗಂಟೆ 1.00ಕ್ಕೆ ಭೂರಿಭೋಜನ ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ ಉಭಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.