ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಸ್ವ-ಸಹಾಯ ಸಂಘಗಳ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಅ.02 ರಂದು ಕಾರ್ಯಕ್ರಮ ನಡೆಸಲಾಯಿತು. ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ದೂರದೃಷ್ಟಿ ಯೋಜನೆ ತಯಾರಿಕೆ, ಉದ್ಯೋಗ ಖಾತರಿ ಯೋಜನೆಯ ಹೆಚ್ಚುವರಿ ಕ್ರಿಯಾಯೋಜನೆ ತಯಾರಿಕೆಯ ವಿಶೇಷ ಗ್ರಾಮ ಸಭೆ ಹಾಗೂ ಬಯಲು ಬಹಿರ್ದೆಸೆ ಮುಕ್ತ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಸದಸ್ಯರುಗಳಾದ ಪುಷ್ಪರಾಜ್ ಪಡ್ಪು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಅದೇ ರೀತಿ ಸಂಜೀವಿನಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳಾದ ವಿಮಲಾಕ್ಷಿ ಗೋಳ್ಯಾಡಿ, ಸುನಂದಾ ಗಡಿಕಲ್ಲು, ಗ್ರಾಮಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ ಗಡಿಕಲ್ಲು, ವಸಂತ ಕೊರಂಬಟ, ಲೀಲಾವತಿ ಶಿರೂರು, ನವ್ಯ ನಡುಗಲ್ಲು, ಮಮತಾ ಮರಕತ, ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ ಕೊಲ್ಲಮೊಗ್ರು, ನೇತ್ರಾವತಿ ಗಡಿಕಲ್ಲು ಹಾಗೂ ಅಂಗನವಾಡಿ ಸಹಾಯಕಿಯರಾದ ಮಾಲಿನಿ ತಂಬಿನಡ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಕಾರ್ಯದರ್ಶಿ ಮೋಹನ್.ಕೆ ಕಡ್ತಲ್ ಕಜೆ ಸ್ವಾಗತಿಸಿ ವಂದಿಸಿದರು.
(ವರದಿ :- ಉಲ್ಲಾಸ್ ಕಜ್ಜೋಡಿ)