ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ಅ.2 ರಂದು ಅಜಾದಿ ಕಾ ಅಮೃತ ಮಹೋತ್ಸವದ ಮತ್ತು ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತಿನ ಸ್ವಚ್ಛವಾಹಿನಿ ವಾಹನಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕುಮಾರ್ ಕೆ. ಎಸ್ ಇವರು ಚಾಲನೆಯನ್ನು ನೀಡಿದರು.
ಕಲ್ಮಡ್ಕ ಗ್ರಾಮ ಪಂಚಾಯತಿನ ನೂತನವಾಗಿ ನಿರ್ಮಿಸಿದ ಸ್ವಚ್ಛ ಸಂಕೀರ್ಣದ ಕಟ್ಟಡವನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ನಡ್ಕ ಉದ್ಘಾಟಿಸಿದರು. ಬಳಿಕ ಗಾಂಧಿ ನಡಿಗೆಯ ಮೂಲಕ ಸ್ವಚ್ಛತಾ ಜಾಥಾ ಮಾಡಲಾಯಿತು ಮತ್ತು ಉದ್ಯೋಗ ಖಾತರಿ ಹೆಚ್ಚುವರಿ ಕ್ರಿಯಾಯೋಜನೆ ಮತ್ತು ಸೋಕ್ ಪಿಟ್ 100 ದಿನಗಳ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಾಜಿರಾ ಗಫೂರ್, ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಕೆ ಎಸ್, ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಹರೀಶ ಎಂ, ಮೀನಾಕ್ಷಿ ಕೆ, ಮೋಹಿನಿ ಎಂ, ಪವಿತ್ರಾ ಕುಧ್ವ , ಜಯಲತಾ ಕೆ.ಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ ಹಾಗೂ ಕಾರ್ಯದರ್ಶಿ ಗೋಪಾಲಕೃಷ್ಣ ಕೆ ಹಾಗೂ ಸಿಬ್ಬಂದಿ ವರ್ಗ, ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ನಡ್ಕ, ಅಂಗನವಾಡಿ ಕಾರ್ಯಕರ್ತೆಯರು , ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು , ಗುತ್ತಿಗೆದಾರರಾದ ರವೀಶ್ ಆಕ್ರಿಕಟ್ಟೆ ಮತ್ತು ಗಣೇಶ್, ಸಂಘ ಸದಸ್ಯರುಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.