
ಹರಿಪುರದಲ್ಲಿ ಸ.ಕಿ.ಪ್ರಾ.ಶಾಲೆಯಲ್ಲಿ ಅ.02 ರಂದು ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ದಿನಾಚರಣೆ, ಸನ್ಮಾನ ಹಾಗೂ 2019-20ನೇ ಸಾಲಿನ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಎನ್ ಎನ್ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಕು.ರಶ್ಮಿ.ಬಿ ಮತ್ತು ಮಾ.ವಿಕಾಸ್.ಕೆ.ಎಸ್, ಎಸ್.ಎಸ್.ಎಲ್.ಸಿ ಪರೀಕ್ಷಾ ಸಾಧಕರಾದ ಕು.ನಿಶ್ಮಿತಾ.ಕೆ.ಜಿ ಹಾಗೂ ಕು.ಸಿಂಚನಗೌರಿ, ಈ ಬಾರಿ ನವೋದಯ ಪರೀಕ್ಷೆ ಬರೆದು ಆಯ್ಕೆಯಾಗಿರುವ ಕು.ನಿಷ್ಮಾ ಬಿ. ಇವರನ್ನು ಸನ್ಮಾನಿಸಲಾಯಿತು. ಹಾಗೂ ಮಾಜಿ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀಮತಿ ಗೀತಾ, ಶ್ರೀಮತಿ ಲಲಿತಾ, ವಿಶ್ವನಾಥ್.ಎಂ ಹಾಗೂ ಮೋನಪ್ಪ ನಾಯ್ಕ್ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದ ಸದಾಶಿವ.ಜಿ.ಟಿ, ಶಾಲಾ ಆಟದ ಮೈದಾನ ವಿಸ್ತರಣೆಗೆ ಜಿಲ್ಲಾ ಪಂಚಾಯತ್ ಅನುದಾನವನ್ನು ಒದಗಿಸಿಕೊಡುವಲ್ಲಿ ಸಹಕರಿಸಿದ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಹಾಗೂ ಊರಿನ ಹಿರಿಯರಾಗಿದ್ದ ಪೇರಪ್ಪ ಗೌಡ ಇವರನ್ನು ಸನ್ಮಾನಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಹಾಗೂ ಪೋಷಕರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷ ತೀರ್ಥೇಶ್.ಬಿ, ಗ್ರಾಮ ಪಂಚಾಯತ್ ಸದಸ್ಯರಾದ ಲತಾ ಕುಮಾರಿ, ಗಣಪತಿ ಭಟ್, ಪೇರಪ್ಪ ಗೌಡ, ದೊಡ್ಡಣ್ಣ ಗೌಡ ಚಿಕ್ಮುಳಿ, ಮಾಜಿ ಎಸ್.ಡಿ.ಎಂ.ಸಿ ಅದ್ಯಕ್ಷ ನಾರಾಯಣ ನಾಯ್ಕ್ ಬಿ. ಉಪಸ್ಥಿತರಿದ್ದರು.
ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರು, ಶಾಲಾ ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀದೇವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಸುಷ್ಮಾ.ಟಿ.ಎಸ್ ವಂದಿಸಿದರು.