ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಸ್.ಡಿ.ಎಂ.ಸಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅ.02 ರಂದು ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ನಾಟಕ ಹಾಗೂ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಿತು.
ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹರಿಹರ ಪಲ್ಲತ್ತಡ್ಕದ ಮುಖ್ಯ ಪೇಟೆಯವರೆಗೆ ಗಾಂಧಿ ನಡಿಗೆ, ವಾಹನ ಜಾಥಾ ಹಾಗೂ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಬಾಷಣ, ಶಾಲಾ ಮಕ್ಕಳಿಂದ ನಾಟಕ ಹಾಗೂ ಗಾಂಧಿ ತತ್ವ ಸಾರುವ ಗೀತ ಗಾಯನ ಮುಂತಾದ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಹಿಮ್ಮತ್.ಕೆ.ಸಿ, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆ, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಪಿ.ಡಿ.ಓ ಪುರುಷೋತ್ತಮ ಮಣಿಯಾನ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನುಪ್ ಮಲ್ಲಾರ, ಶಿವಹರಿ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ದಯಾನಂದ ಪರಮಲೆ, ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಙಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕದ ಮುಖ್ಯೋಪಾಧ್ಯಾಯರಾದ ಶೇಷಪ್ಪ, ಹಾಗೂ ಸ್ಥಳೀಯರಾದ ನವೀನ ಬಾಳುಗೋಡು, ಪದ್ಮನಾಭ, ಕುಮಾರ್ ಕುಕ್ಕುಂದ್ರಡ್ಕ, ನವೀನ್, ರವೀಶ್, ಚೇತನ್, ಹರ್ಷಿತಾ, ರಿಕ್ಷಾ ಚಾಲಕರು, ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಅದ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
(ವರದಿ :- ಉಲ್ಲಾಸ್ ಕಜ್ಜೋಡಿ)