
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕೋಟೆಮುಂಡುಗಾರು ಇದರ 2020-21ನೇ ವರ್ಷದ
ವಾರ್ಷಿಕ ಮಹಾಸಭೆಯು ಅ.08ನೇ ಶುಕ್ರವಾರ ಪೂರ್ವಾಹ್ನ ಗಂಟೆ 10-30ಕ್ಕೆ ಸರಿಯಾಗಿ ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರು ಇಲ್ಲಿನ ಸಭಾಭವನದಲ್ಲಿ ನಡೆಯಲಿದೆ. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕೂಸಪ್ಪ ಗೌಡ ಎಂ ಇವರು ವಹಿಸಲಿದ್ದಾರೆ. ಎಲ್ಲಾ ಸದಸ್ಯರು ಸಭೆಗೆ ಸಕಾಲಕ್ಕೆ ಹಾಜರಾಗಿ ಸಭೆಯ ಕಾರ್ಯಕಲಾಪಗಳನ್ನು ನೆರವೇರಿಸಿಕೊಡಬೇಕಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ನಾಯಕ್ ವಿನಂತಿಸಿದ್ದಾರೆ.