Ad Widget

ಕ್ರೈಸ್ತ ಅಲ್ಪಸಂಖ್ಯಾತ ಸೊಸೈಟಿಯ ಮಹಾಸಭೆ – 12% ಡಿವಿಡೆಂಡ್ ಘೋಷಣೆ

ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನೀಲಂ ಅಧ್ಯಕ್ಷತೆಯಲ್ಲಿ ಸೆ.18 ರಂದು ಸಂಘದ 3ನೇ ಮಹಡಿಯಲ್ಲಿ ನಡೆಯಿತು.ಸಂಘವು 2020-21 ನೇ ವರ್ಷದ ಅವಧಿಯಲ್ಲಿ ಲಾಭಗಳಿಸಿದ್ದನ್ನು ಪರಿಗಣಿಸಿ, ತನ್ನ ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡುವುದೆಂದು ಅಧ್ಯಕ್ಷರು ಘೋಷಿಸಿದರು. 2020-21 ನೇ ವರ್ಷದ ಆಡಳಿತ ಮಂಡಳಿ ವರದಿಯನ್ನು...

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅಶ್ವಿನಿ ಮುಂಡೋಡಿ ಉತ್ತೀರ್ಣ

ಕಳೆದ ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿಪೇಪರ್ 1 ಹಾಗೂ ಪೇಪರ್ 2 ಎರಡರಲ್ಲೂ ಪ್ರಥಮ ಪ್ರಯತ್ನದಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ಇವರು ಮರ್ಕಂಜ ಗ್ರಾಮದ ಮುಂಡೋಡಿ ಜನಾರ್ಧನ ಹಾಗೂ ಸರಸ್ವತಿ ದಂಪತಿಗಳ ಪುತ್ರಿ. ಪ್ರಸ್ತುತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Ad Widget

ದುಗ್ಗಲಡ್ಕ : ಪ್ರೊಬೆಷನರಿ ತಹಶೀಲ್ದಾರ್ ಅಕ್ರಂ ಷಾ ವಿದ್ಯಾರ್ಥಿಗಳೊಂದಿಗೆ ಸಂವಾದ

ಸುಳ್ಯ ತಾಲೂಕಿನ ಪ್ರೊಬೆಷನರಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಆಡಳಿತ ಸೇವೆಯ ‌ಅಧಿಕಾರಿ ಅಕ್ರಂರವರು ಸೆ.17 ರಂದು ಸರಕಾರಿ ಪ್ರೌಢಶಾಲೆ ದುಗ್ಗಲಡ್ಕಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತುಂಬು ಸೌಜನ್ಯದೊಂದಿಗೆ ತಮ್ಮ ಯು ಪಿ ಎಸ್ ಸಿ ಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಉತ್ತಮ ಶೈಕ್ಷಣಿಕ ತಳಹದಿಯನ್ನು ರೂಪಿಸಿಕೊಂಡು, ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ...

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅಶ್ವಿನಿ ಮುಂಡೋಡಿ ಉತ್ತೀರ್ಣ

ಕಳೆದ ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪೇಪರ್ 1 ಹಾಗೂ ಪೇಪರ್ 2 ಎರಡರಲ್ಲೂ ಪ್ರಥಮ ಪ್ರಯತ್ನದಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ಇವರು ಮರ್ಕಂಜ ಗ್ರಾಮದ ಮುಂಡೋಡಿ ಜನಾರ್ಧನ ಹಾಗೂ ಸರಸ್ವತಿ ದಂಪತಿಗಳ ಪುತ್ರಿ. ಪ್ರಸ್ತುತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ...

ದೇವಚಳ್ಳ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ

ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ದೇವಚಳ್ಳ ಗ್ರಂಥಾಲಯವು ಇಂದು ಡಿಜಿಟಲ್ ಗ್ರಂಥಾಲಯವಾಗಿ ನವೀಕೃತಗೊಂಡು ಉದ್ಘಾಟನೆಗೊಂಡಿತು.ಶಿಕ್ಷಣ ಇಲಾಖೆಯ ಮಹತ್ವದ ಪರಿಕಲ್ಪನೆಯಡಿ ಕೇವಲ ಹದಿನೈದು ದಿನಗಳಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಂಥಾಲಯವು ಅತ್ಯಂತ ಸುವ್ಯವಸ್ತಿತವಾಗಿ ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಅತ್ಯಾಕರ್ಷಕ ಗೋಡೆ ಬರಹ, ಸುಂದರ ಚಿತ್ರಗಳು, 10,000 ಕ್ಕೂ ಮಿಕ್ಕಿದ ಪುಸ್ತಕಗಳು ಸುಸಜ್ಜಿತ ವಾಚನಾಲಯಗಳಿಂದ ಕೂಡಿರುವ ಗ್ರಂಥಾಲಯಕ್ಕೆ ಇಂದು...

ಮೋದಿ ಜನ್ಮದಿನದ ಅಂಗವಾಗಿ ಬೂಡು ಭಗವತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಸುಳ್ಯ ಕೇರ್ಪಳ ಬೂಡು ಶ್ರೀ ಪನ್ನೆಬೀಡು ಭಗವತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆಯನ್ನು ಬೂಡು ರಾಧಾಕೃಷ್ಣ ರೈ ನೆರೆವೇರಿಸಿದರು. ಈ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈ, ಸುಳ್ಯ ನಗರ ಬಿಜೆಪಿ ನಗರ ಅಧ್ಯಕ್ಷ ಐ.ಬಿ. ಚಂದ್ರಶೇಖರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ,...

ಐವರ್ನಾಡು : ಹಸಿ ಮೀನು ಮಾರುಕಟ್ಟೆ ಉದ್ಘಾಟನೆ

ಐವರ್ನಾಡು ಗ್ರಾಮ ಪಂಚಾಯತ್, ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಹಸಿಮೀನು ಮಾರುಕಟ್ಟೆಯು ಸೆ.17 ರಂದು ಉದ್ಘಾಟನೆಗೊಂಡಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ನೂತನ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್...

ಪೆರುವಾಜೆ : ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕೊರೋನಾ ವಾರಿಯರ್ಸ್ ಗಳಿಗೆ ಭೋಜನ ವ್ಯವಸ್ಥೆ

ಭಾ ಜ ಪಾ ಯುವಮೋರ್ಚಾ ಬೆಳ್ಳಾರೆ ಮಹಾಶಕ್ತಿಕೇಂದ್ರ ತಂಡದ ವತಿಯಿಂದ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ 71ನೇ ಜನ್ಮದಿನದ ಪ್ರಯುಕ್ತ ಪೆರುವಾಜೆ ಗ್ರಾಮ ಪಂಚಾಯತ್ನಲ್ಲಿ ನಡೆದ ಕೋವಿಡ್ ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸಿದ ಆರೋಗ್ಯ ಸಿಬ್ಬಂದಿಗಳಿಗೆ, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಯುವಮೋರ್ಚಾ ವತಿಯಿಂದ ಮಾಡಲಾಯಿತು. ಈ ಸಂದರ್ಭದಲ್ಲಿ...

ಮೋದಿ ಹುಟ್ಟುಹಬ್ಬದ ಅಂಗವಾಗಿ ಯುವ ಮೋರ್ಚಾ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸುಳ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ನಿರಂತರ 3 ತಿಂಗಳುಗಳ ಕಾಲ ಶವ ಸಂಸ್ಕಾರ ಮಾಡಿದ ಸ್ವಯಂಸೇವಕರಿಗೆ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಆಹಾರ ವಸ್ತುಗಳ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್...

ಲೋಹಿತ್ ಕೆ. ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ

ಐನೆಕಿದು ಗ್ರಾಮದ ನವಗ್ರಾಮ ಲೋಹಿತ್ ಕೆ. ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪತ್ರಿಕೆ 1 ಹಾಗೂ ಪತ್ರಿಕೆ 2 ರಲ್ಲಿ ತೇರ್ಗಡೆಯಾಗಿದ್ದಾರೆ. ಇವರು 2020ರಲ್ಲೂ 2 ಪತ್ರಿಕೆಗಳಲ್ಲಿ ತೇರ್ಗಡೆಯಾಗಿದ್ದರು. ಇವರು ಐನೆಕಿದು ಗ್ರಾಮದ ನವಗ್ರಾಮ ಲಿಂಗಪ್ಪ ಮತ್ತು ಪ್ರೇಮ ದಂಪತಿಗಳ ಪುತ್ರ. ಪ್ರಸ್ತುತ ಇವರು ಸ.ಹಿ.ಪ್ರಾ.ಶಾಲೆ ಹರಿಹರ ಪಲ್ಲತ್ತಡ್ಕ...
Loading posts...

All posts loaded

No more posts

error: Content is protected !!