- Friday
- April 18th, 2025

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಪರಮೇಶ್ವರ ಭಟ್ ರವರ ತೋಟದ ಕೆರೆಯಲ್ಲಿ ಮೊಸಳೆ ಪತ್ತೆಯಾಗಿದ್ದು ಭಯವನ್ನುಂಟು ಮಾಡಿದೆ. ಸಣ್ಣ ಗಾತ್ರದ ಮೊಸಳೆಯಾಗಿದ್ದು ಕಳೆದೊಂದು ವಾರದಿಂದ ಕಾಣಸಿಗುತ್ತಿದೆ ಎನ್ನಲಾಗಿದೆ.

ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗುತ್ತಿಗಾರು ಮತ್ತು ನಾಲ್ಕೂರು ಗ್ರಾಮದ ವಿವಿಧೆಡೆ ಸ್ವಾಬ್ ಟೆಸ್ಟ್ ಮಾಡಲಾಗುತ್ತಿದೆ. ಸಿಬ್ಬಂದಿಗಳು ಮನೆಮನೆ ತೆರಳಲು ಗುತ್ತಿಗಾರು ಚರ್ಚ್ ನ ಧರ್ಮಗುರು ಫಾ| ಆದರ್ಶ್ ಪುದಿಯೆಡ್ತ್ ತಮ್ಮ ವಾಹನವನ್ನು ಉಚಿತವಾಗಿ ವ್ಯವಸ್ಥೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ವೈಧ್ಯಾಧಿಕಾರಿ ಶ್ರೀಮತಿ ಚೈತ್ರಭಾನು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು....

ಕೇಂದ್ರದ ಮಾಜಿ ಸಚಿವ ಡಿ. ವಿ ಸದಾನಂದ ಗೌಡ ಅವರದೆಂದು ಹೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಸದಾನಂದ ಗೌಡ ಅವರು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ‘ನನ್ನ ವಿರುದ್ಧ ಫ್ಯಾಬ್ರಿಕೇಟಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ....

ಮಿತ್ರ ಮಂಡಲ ನಾಗತೀರ್ಥ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೆ. 18 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಾರ್ವತಿ ಸಭಾ ಭವನದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ನಿತಿನ್ ಕುಮಾರ್ ನಾಗತೀರ್ಥ ಕಾರ್ಯದರ್ಶಿಯಾಗಿ ನವೀನ್ ನಾಗತೀರ್ಥ, ಕೋಶಾಧಿಕಾರಿಯಾಗಿ ಯತೀಶ್ ನಾಗತೀರ್ಥ, ಕ್ರೀಡಾ ಕಾರ್ಯದರ್ಶಿ ಹರ್ಷಿತ್ ಸಂಪ ಆಯ್ಕೆಯಾಗಿದ್ದರು.ನೂತನ ಪದಾಧಿಕಾರಿಗಳಿಗೆ ಯುವ ಜನ ಸಂಯುಕ್ತ ಮಂಡಳಿ...

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಇಚ್ಛೆ ಇದ್ದೇ ಇರುತ್ತದೆ.ನಮ್ಮೆಲ್ಲರನ್ನು ಮುಂದೆ ಕೊಂಡು ಹೋಗುವುದು ನಮ್ಮ ಸಾತ್ವಿಕ ಕನಸು ಮತ್ತು ಗುರಿ. ಆ ನಿಟ್ಟಿನಲ್ಲಿ ನಮ್ಮ ವಿಚಾರಗಳನ್ನು ನಾವೇ ಹತೋಟಿಯಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗುವುದೇ ಸ್ಥಿತಪ್ರಜ್ಞೆ ಎಂದು ಅಮೇರಿಕಾದ ಡೇಟನ್ ವಿಶ್ವ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ. ಗುಡ್ಡೆ ರಾಘವ ಗೌಡರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ...

ಗುತ್ತಿಗಾರು ಎಸ್.ಬಿ.ಗ್ರೂಪ್ಸ್ ವತಿಯಿಂದ ಅರ್ಪಿತ್ ಕೋಲ್ಚಾರ್ ಸ್ಮರಣಾರ್ಥವಾಗಿ ಗ್ರಾಮೀಣ ಪ್ರತಿಭೆ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಗುತ್ತಿಗಾರು ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿ ನಿಶ್ಮಿತಾ ಕೆ.ಜಿ.ಇವಳನ್ನು ಸನ್ಮಾನಿಸಲಾಯಿತು.

ಯುವಜನ ಸಂಯುಕ್ತ ಮಂಡಳಿಯ 2020-21 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.18ರಂದು ಮಂಡಳಿ ಅಧ್ಯಕ್ಷ ಅನಿಲ್ ಪೂಜಾರಿಮನೆ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದಿಲೀಪ್ ಬಾಬ್ಲುಬೆಟ್ಟು, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ಕೆ.ಎಸ್. ಉಪಸ್ಥಿತರಿದ್ದರು. ಕೊರೊನಾ ವಾರಿಯರ್ ಆಗಿ ಪಾರದರ್ಶಕ ಸೇವೆಗಾಗಿ ಮಂಡಳಿಯ ಪೂರ್ವಾಧ್ಯಕ್ಷ ಶೈಲೇಶ್ ಅಂಬೆಕಲ್ಲು ರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ...

ಮಂಗಳೂರು ಆಟೋರಿಕ್ಷಾ ಹಾಗೂ ಕಾರು ಚಾಲಕರ ಸಹಕಾರಿ ಸಂಘ ನಿಯಮಿತ (MACO) ಇದರ ಸುಳ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕರು ಹಾಗೂ ಸಂಘದ ಅಧ್ಯಕ್ಷರಾದ ಐವನ್ ಡಿ'ಸೋಜಾರವರು ಇಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಚಾಲನೆಯನ್ನು ನೀಡಿದರು.ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆ, ಉಪಾಧ್ಯಕ್ಷರಾದ...

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ ಭಕ್ತಿಗೀತೆಯನ್ನು ಸೆ.10 ರ ಗಣೇಶ ಚತುರ್ಥಿ ಹಬ್ಬದ ದಿನದಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಯಂತ್ ನಾಯ್ಕ್ ಎಲ್ಲಪಡ್ಕ, ಗಿರೀಶ್ ಕಾಂತುಕುಮೇರಿ, ಸಂತೋಷ್ ನಾಯ್ಕ್ ಗಡಿಕಲ್ಲು, ಶ್ರೀಕಾಂತ್ ಪಂಜ, ಗಣೇಶ್ ಮಂಚಿಕಟ್ಟೆ, ರಾಮಣ್ಣ ಮಂಚಿಕಟ್ಟೆ, ದಯಾನಂದ ಏನೆಕಲ್ಲು,...

ಕಡಬ ತಾಲೂಕಿನ ಕೇನ್ಯ ಗ್ರಾಮದಲ್ಲಿ ಹಿಂದೂ ಜಾಗರಣ ವೇದಿಕೆ ಮಹಾವಿಷ್ಣು ಘಟಕ ಕಣ್ಕಲ್ ನೇಲಡ್ಕ ವತಿಯಿಂದ ನೂತನವಾಗಿ ನಿರ್ಮಿಸಿದ ವೀರ್ ಸಾವರ್ಕರ್ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ಸೆ.18ರಂದು ನಡೆಯಿತು. ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್ ರೈ ರವರು ನೂತನ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿದರು. ವಾಸುದೇವ ಕೆರೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ರಘುನಾಥ ರೈ...

All posts loaded
No more posts