Ad Widget

ಹರೀಶ್ ಕಂಜಿಪಿಲಿ ಅವರನ್ನು ಮಂಡಲ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಒತ್ತಾಯ

. . . . . . . . .

ಸರಸ್ವತಿ ಕಾಮತ್ ಅವರ ಮೇಲೆ ಆದ ದೈಹಿಕ ಹಲ್ಲೆ ಯ ಕುರಿತು ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದ್ದು ಸಂತಸ ತಂದಿದೆ. ಅಂದಿನ ಪೊಲೀಸ್ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ಈಗಿನ ಪೊಲೀಸ್ ಅಧಿಕಾರಿಗಳು ಅಪರಾಧಿಗಳು ರಾಜಾರೋಷವಾಗಿ ಓಡಾಡದಂತೆ ಜಾಗೃತಿವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ ಅವರು ಹೇಳಿದರು. ಕಾಂಗ್ರೆಸ್ ಹಿರಿಯ ಮುಖಂಡ ಭರತ್ ಮುಂಡೋಡಿ ಮಾತನಾಡಿ ಹರೀಶ್ ಕಂಜಿಪಿಲಿ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಳಿಸಲಿ. ಇಲ್ಲವೇ ಹರೀಶ್ ಕಂಜಿಪಿಲಿ ಅವರೇ ನೈತಿಕ ಹೊಣೆ ಹೊತ್ತು ಈ ತೀರ್ಪನ್ನು ಗೌರವಿಸಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದರು. ಮೇಲ್ಮನವಿ ಸಲ್ಲಿಸುವಾಗಲೂ ಕಾಂಗ್ರೆಸ್ ಸರಸ್ವತಿ ಅವರ ಜೊತೆ ನಿಲ್ಲಲಿದೆ ಅಭಯ ನೀಡಿದರು.
ಸರಸ್ವತಿ ಕಾಮತ್ ಮಾತನಾಡಿ ಹೆಣ್ಣು ಮಕ್ಕಳಿಗೆ ನ್ಯಾಯಾಂಗದಲ್ಲಿ ನ್ಯಾಯ ದೊರಕಿದ್ದು ಖುಷಿ ಇದೆ.ಬಿಜೆಪಿ ಅಂತ ಅಲ್ಲ ಕಾಂಗ್ರೆಸ್ ಕೂಡ ಇಂಥ ಕೃತ್ಯವನ್ಙು ಮಾಡಬಾರದು. ಒಂದೊಂದು ಕಡೆ ಒಂದೊಂದು ಪಕ್ಷ ಪ್ರಬಲವಾಗಿರುತ್ತದೆ ಎಂದರು.
ಚಂದ್ರಶೇಖರ ಕಾಮತ್ ಅವರೂ ಕೂಡ ತಮ್ಮ ಮೇಲೆ ನಡೆದ ದೌರ್ಜನ್ಯದ ಕುರಿತು ನೋವು ತೋಡಿಕೊಂಡರು.

. . . . . . .

ಈ ಸಂದರ್ಭ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಪ್ರಮುಖರಾದ ಭರತ್ ಮುಂಡೋಡಿ, ಎ.ಕೆ ಇಬ್ರಾಹಿಂ, ಧರ್ಮಪಾಲ ಕೊಯಿಂಗಾಜೆ, ಸಂಶುದ್ದಿನ್ ,ಸುರೇಶ್ ಅಮೈ, ವೆಂಕಪ್ಪ ಗೌಡ ನಾರ್ಕೋಡು, ಕೆ.ಎಂ.ಮುಸ್ತಾಫ, ಅನಿಲ್ ರೈ ಬೆಳ್ಳಾರೆ, ಶಾಫಿ ಕುತ್ತಮೊಟ್ಟೆ, ರಾಜೀವಿ ರೈ ಬೆಳ್ಳಾರೆ, ಸೋಮಶೇಖರ್ ಕೊಯಿಂಗಾಜೆ, ಶಕುಂತಲಾ ಬೆಳ್ಳಾರೆ, ಶಾಹುಲ್ ಹಮೀದ್, ಆನಂದ ಬೆಳ್ಳಾರೆ, ವಿಠಲ್ ದಾಸ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading