Ad Widget

ಯುವಮೋರ್ಚಾ ಕಾರ್ಯನಿರ್ವಹಣಾ ತಂಡದ ಸಭೆ – ನೂತನ ಕಾರ್ಯದರ್ಶಿ, ಸದಸ್ಯರಿಗೆ ಗೌರವ ಸಲ್ಲಿಕೆ

ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಕಾರ್ಯನಿರ್ವಹಣ ತಂಡದ ಸಭೆ ಸುಳ್ಯದ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಸುಳ್ಯ ಮಂಡಲದ ಕಾರ್ಯದರ್ಶಿ ಶ್ರೀಮತಿ ಮೋಹಿನಿ ನಾಗರಾಜ್ ನೆರವೇರಿಸಿ ಶುಭಹಾರೈಸಿದರು. ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕುಮಾರಿ ಸಿಂಧೂ ಹಾಗೂ ಸದಸ್ಯೆಯಾಗಿ ಆಯ್ಕೆಯಾದ ಮುಮ್ತಾಜ್ ನೆಲ್ಯಡ್ಕ ಇವರನ್ನು ಪಕ್ಷದ ಸಾಲು ಹಾಕಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು...

ಹರೀಶ್ ಕಂಜಿಪಿಲಿ ಅವರನ್ನು ಮಂಡಲ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಒತ್ತಾಯ

ಸರಸ್ವತಿ ಕಾಮತ್ ಅವರ ಮೇಲೆ ಆದ ದೈಹಿಕ ಹಲ್ಲೆ ಯ ಕುರಿತು ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದ್ದು ಸಂತಸ ತಂದಿದೆ. ಅಂದಿನ ಪೊಲೀಸ್ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ಈಗಿನ ಪೊಲೀಸ್ ಅಧಿಕಾರಿಗಳು ಅಪರಾಧಿಗಳು ರಾಜಾರೋಷವಾಗಿ ಓಡಾಡದಂತೆ ಜಾಗೃತಿವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ ಅವರು ಹೇಳಿದರು. ಕಾಂಗ್ರೆಸ್ ಹಿರಿಯ ಮುಖಂಡ ಭರತ್...
Ad Widget

ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರ

ಕರ್ನಾಟಕ ಅರೆಭಾಷೆ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿ, ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜಿನ ಐ ಕ್ಯೂ ಎ ಸಿ ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ದ ವತಿಯಿಂದ ಅರೆಭಾಷೆ ಸಂಸ್ಕೃತಿ ಶಿಬಿರ ಸೆ.7 ರಂದು ಉದ್ಘಾಟನೆಗೊಂಡಿತು.ಶಿಬಿರವನ್ನು ಮೋಹನ್ ರಾಂ ಸುಳ್ಳಿ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ...

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

2020-21ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮತ್ತು ವಿವಿಧ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸೆ. 8ರಂದು ನಡೆಯಿತು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನೆಟ್ಟಾರು ವೆಂಕಟ್ರಮಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ...

ಬೆಳ್ಳಾರೆ ಜೇಸಿಐ ಮತ್ತು ಕ್ಷಯ ಚಿಕಿತ್ಸಾ ಘಟಕದ ವತಿಯಿಂದ ಸಚಿವ ಅಂಗಾರರ ಭೇಟಿ

ಜೆಸಿಐ ಬೆಳ್ಳಾರೆ ಮತ್ತು ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ಕ್ಷಯ ಮುಕ್ತ ಭಾರತದ ಅಂಗವಾಗಿ ಬಿಡುಗಡೆಗೊಳ್ಳಲಿರುವ ಕಿರುಚಿತ್ರ "ಹೆಜ್ಜೆ ಬದಲಾದಾಗ " ಇದರ ಭಿತ್ತಿಪತ್ರವನ್ನು ಕರ್ನಾಟಕ ಸರಕಾರದ ಸಚಿವರಾದ ಎಸ್ ಅಂಗಾರ ಸರ್ ರವರಿಗೆ ಅವರ ನಿವಾಸದಲ್ಲಿ ನೀಡಲಾಯಿತು .ಈ ಸಂದರ್ಭದಲ್ಲಿ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ...

ಮುಕ್ಕೂರು: ಜ್ಯೋತಿ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ

ಮುಕ್ಕೂರು ಜ್ಯೋತಿ ಯುವಕ ಮಂಡಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೆ.5 ರಂದು ಪೆರುವೋಡಿ ದೇವಾಲಯದ ವಠಾರದಲ್ಲಿ ನಡೆಯಿತು.ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ನಿತಿನ್ ಕಾನಾವು, ಕಾರ್ಯದರ್ಶಿಯಾಗಿ ಧನಂಜಯ ನೀರ್ಕಜೆ, ಕೋಶಾಧಿಕಾರಿಯಾಗಿ ದಯಾನಂದ ಗೌಡ ಜಾಲು, ಉಪಾಧ್ಯಕ್ಷರಾಗಿ ಸಂದೀಪ್ ಕುಂಜಾಡಿ, ಜತೆ ಕಾರ್ಯದರ್ಶಿಯಾಗಿ ಚರಣ್ ಮಡಿವಾಳ ಆಯ್ಕೆಯಾದರು.ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೊಂಡೆಪ್ಪಾಡಿ, ಕಾರ್ಯದರ್ಶಿ ನವೀನ್...

ಸಂಪಾಜೆ : ಸೊಸೈಟಿ ಮಹಾಸಭೆ – ಶೇ.12 ಡಿವಿಡೆಂಡ್ ಘೋಷಣೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 100 ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಮನ್ವಯ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ದಿ.07-09-2021 ರಂದು ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ರವರು ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘ ವರದಿ ಸಾಲಿನಲ್ಲಿ ಸದಸ್ಯತನ, ಪಾಲು ಬಂಡವಾಳ, ಧನ ವಿನಿಯೋಗ, ಠೇವಣಿಗಳು, ವ್ಯವಹಾರ...

ವಿಶಿಷ್ಟ ಸಾಧನೆಗಾಗಿ ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಸನ್ಮಾನ

ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ವಿಷೇಶ ಸಾಧನೆಗೈದ ಸುಳ್ಯ ಡಿವಿಷನ್ ನ ಮೂವರು ನಾಯಕರನ್ನು ಸನ್ಮಾನಿಸಲಾಯಿತು. ಸಂಘಟನಾ ಕಾರ್ಯಾಚರಣೆ ಯ ಮೂಲಕ ಅನನ್ಯ ಸೇವೆಗೈದು, ಇತ್ತೀಚೆಗೆ ಝುಹ್ರೀಸ್ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಝುಹ್ರಿ ಕಲ್ಲುಗುಂಡಿ, ಸ್ವತಃ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಅದರ ಮೂಲಕ ಒಂದು...

ಅಡಿಕೆ ತೋಟದಲ್ಲಿ ಅಡಿಕೆ ಸುಳಿ ಕೊಳೆರೋಗ ಪತ್ತೆ : ಸಿ.ಪಿ.ಸಿ.ಆರ್‌.ಐ ವಿಜ್ಞಾನಿಗಳ ತಂಡ ಭೇಟಿ

ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ ತೋಟದಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗ ಪತ್ತೆಯಾಗಿದ್ದು ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದರು. ಕಡಬ ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಅವರ...
error: Content is protected !!