ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆಯು ಸೆ.03 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಹಕ್ಕುಪತ್ರ ವಂಚಿತ ಕಡಬ ತಾಲೂಕಿನ ಬಡ ರೈತರಿಗೆ ಹಾಗೂ 94.C ಅಡಿಯಲ್ಲಿ ಅರ್ಜಿ ಕೊಟ್ಟ ವಸತಿ ರಹಿತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಮುಂದಿನ ತಿಂಗಳು ಕಡಬ ತಾಲೂಕು ಕಛೇರಿ ಎದುರು ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳುವುದು ಎಂದು ತೀರ್ಮಾನಿಸಲಾಯಿತು
ಸಭೆಯಲ್ಲಿ ರವೀಂದ್ರ ಕುಮಾರ್ ರುದ್ರಪಾದ, ಎಂ.ಪಿ.ಯೂಸುಫ್, ವಾಸುದೇವ ನೇಲಡ್ಕ, ಐತ್ತೂರು ಗ್ರಾಮಪಂಚಾಯತ್ ಸದಸ್ಯರಾದ ಈರೇಶ್ ಐತ್ತೂರು, ಉಮೇಶ್ ಕಜ್ಜೋಡಿ, ಶಶಿಧರ, ಹವಿತ್, ದೀಕ್ಷಿತ್, ಹರೀಶ್ ಕಲ್ಲುಗುಂಡಿ, ಕುರಿವಳ್ ಮುಂತಾದವರು ಉಪಸ್ಥಿತರಿದ್ದರು.
✍ವರದಿ :- ಉಲ್ಲಾಸ್ ಕಜ್ಜೋಡಿ