Ad Widget

ಪೆರುವೋಡಿ : ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪೆರುವೋಡಿ : ಮುಕ್ಕೂರುಜ್ಯೋತಿ ಯುವಕ ಮಂಡಲ,ಯುವಸೇನೆ ಮುಕ್ಕೂರುಧರ್ಮಸ್ಥಳ ಗ್ರಾಮಾಭಿವೃದ್ದಿ ಸ್ವ ಸಹಾಯ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸೆ.5 ರಂದು ಪೆರುವೋಡಿ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ‌ಅರ್ಚಕ ಸುರೇಶ್ ಉಪಾಧ್ಯಾಯ ದೀಪ ಬೆಳಗಿಸಿದರು. ಸತ್ಯಪ್ರಸಾದ್ ಕಂಡಿಪ್ಪಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಬೆಳ್ಳಾರೆ ಜೆಸೀಐ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಗ್ರಾ.ಪಂ.ಸದಸ್ಯೆ ಗುಲಾಬಿ...

ತಳೂರು : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಅಪಾಯದಿಂದ ಪಾರು

ತಳೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ. ಧರ್ಮಸ್ಥಳಕ್ಕೆ ಹೋಗಿ ಹಿಂದಿರುಗುತ್ತಿದ್ದ ಕೋಲ್ಚಾರ್ ನ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
Ad Widget

ಮಕ್ಕಳಿಂದಲೇ ನಡೆಸಲ್ಪಡುವ ಚಿರಾಯು ಸ್ಟುಡೆಂಟ್ಸ್ ಕ್ಲಬ್‌ನ ಎರಡನೇ ಘಟಕ ಉದ್ಘಾಟನೆ : ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ – ವಿನುತಾ ಪಾತಿಕಲ್ಲು

ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಲು ಮಕ್ಕಳಿಂದಲೇ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್‌ನ ಎರಡನೇ ಘಟಕ ಇದೀಗ ಪ್ರಾರಂಭಗೊಂಡಿದೆ. ಮಂಡೆಕೋಲಿನ ಕಣೆಮರಡ್ಕದಲ್ಲಿ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್ ನ ಎರಡನೇ ಘಟಕದ ಉದ್ಘಾಟನೆಯನ್ನು ಮಂಡೆಕೋಲು ಗ್ರಾ.ಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು ಸೆ.5 ರಂದು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಆರಂಭದ ಹಂತದಲ್ಲೇ ಮಕ್ಕಳ ಪ್ರತಿಭೆ...

ಬಾಳಿಲ ಶಾಲಾ ಶಿಕ್ಷಕ ಶಿವಪ್ರಸಾದ್.ಜಿ ಯವರಿಗೆ ತಾಲೂಕು ಉತ್ತಮ ಸ್ಕೌಟ್ಸ್ ಶಿಕ್ಷಕ ಪ್ರಶಸ್ತಿ

ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೆಪಿಎಸ್ ಬೆಳ್ಳಾರೆ ಇಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಪ್ರಸಾದ್ ಜಿ. ಇವರಿಗೆ ತಾಲೂಕು ಉತ್ತಮ ಸ್ಕೌಟ್ಸ್ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೇನ್ಯ: ನೇಲ್ಯಡ್ಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ

ಹಿಂದೂ ಜಾಗರಣ ವೇದಿಕೆ ಮಹಾವಿಷ್ಣು ಘಟಕ ಕಣ್ಕಲ್ ಕೇನ್ಯ ಹಾಗೂ ಸ.ಕಿ.ಪ್ರಾಥಮಿಕ ಶಾಲೆ ನೇಲ್ಯಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಸ್ವಚ್ಚತಾ ಶ್ರಮದಾನವನ್ನು ಸೆ.5ರಂದು ನಡೆಸಲಾಯಿತು. ಈ ಶ್ರಮದಾನದಲ್ಲಿ ಹಿಂ.ಜಾ.ವೇ.ಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ನೇಲ್ಯಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.

ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಸರ್ಕಾರ

ಕಳೆದ ಕೆಲವು ದಿನಗಳಿಂದ ಚರ್ಚೆಯ ಕೇಂದ್ರಬಿಂದು ಆಗಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಬಗ್ಗೆ ಕೊನೆಗೂ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಿದೆ.ಸೆ.05 ರಂದು ತಮ್ಮ ಗೃಹ ಕಛೇರಿ ಕೃಷ್ಣಾದಲ್ಲಿ ತಜ್ಞರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ. ದೇವಸ್ಥಾನಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಅವಕಾಶ ನೀಡಲಾಗಿದ್ದು...

ಸುಳ್ಯ : ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ವತಿಯಿಂದ ಸಚಿವ ಅಂಗಾರರ ಭೇಟಿ

ಕರ್ನಾಟಕ ಸರ್ಕಾರದ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಇವರನ್ನು ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ವತಿಯಿಂದ ಸೆ.4 ರಂದು ಸುಳ್ಯದಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು. ನಂತರ ರಬ್ಬರ್ ಟ್ಯಾಪರ್ಸ್ ಕೃಷಿ ಕಾರ್ಮಿಕರ ಕಷ್ಟ ನಷ್ಟಗಳನ್ನು ಸಚಿವರಿಗೆ ಮನವರಿಕೆ ಮಾಡಲಾಯಿತು.ಈ ಸಂದರ್ಭದಲ್ಲಿ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ...

ಕಲ್ಮಡ್ಕ : ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ – ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ

ಯುವಸ್ಫೂರ್ತಿ ಸೇವಾ ಸಂಘ ಕಲ್ಮಡ್ಕ ಕಳೆದ ಐದು ವರುಷಗಳಿಂದ ನಿರಂತರವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಈ ಬಾರಿ ಕೂಡ ಸರಕಾರದ ನಿಯಮದನುಸಾರ ಸೆ.5 ರಂದು 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೇವಿಪ್ರಸಾದ್ ಮರಕ್ಕಡ ನೆರವೇರಿಸಿದರು. ಯಮುನಾ ಓಟೆಕಜೆ ಸಾಂಕೇತಿಕವಾಗಿ...

ವಳಲಂಬೆ : ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರವೀಶ್ ಮೊಟ್ಟೆಮನೆ

ಗುತ್ತಿಗಾರು ಗ್ರಾಮದ ವಳಲಂಬೆ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆಯು ಸೆ.02 ರಂದು ನಡೆಯಿತು.ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರವೀಶ್ ಕುಮಾರ್ ಮೊಟ್ಟೆಮನೆ, ಉಪಾಧ್ಯಕ್ಷರಾಗಿ ಅಭಿಲಾಷಾ.ಎಸ್.ಎಂ ಮೋಟ್ನೂರು ಆಯ್ಕೆಯಾದರು.ಸದಸ್ಯರುಗಳಾಗಿ ಸತ್ಯವತಿ.ವಿ, ಯುವರಾಜ.ಎ, ಮಿಸ್ರಿಯಾ.ವಿ, ಭವಾನಿಶಂಕರ.ಎ.ಎಲ್, ನೂತನ್.ಡಿ, ಗೋಪಾಲಕೃಷ್ಣ.ಎ, ಎನ್.ದೇವಣ್ಣ ಗೌಡ, ಜಯರಾಮ.ಎ, ಹೆಚ್.ಕುಶಾಲಪ್ಪ ಗೌಡ, ದುರ್ಗಾಪರಮೇಶ್ವರಿ, ನಳಿನಾಕ್ಷಿ.ಪಿ.ಎಸ್, ಅನಿತಾ, ರೇಷ್ಮಾ.ಹೆಚ್, ರೋಹಿತ್.ಕೆ, ಸದಾನಂದ.ಎನ್.ಎಸ್, ರೇವತಿ.ಕೆ ಆಯ್ಕೆಯಾದರು.ಪದನಿಮಿತ್ತ ಸದಸ್ಯರುಗಳಾಗಿ ಪ್ರಮೀಳಾ.ಪಿ.ಎಸ್,...

ಬೆಳ್ಳಾರೆ : ವ್ಯಕ್ತಿ ಕಾಣೆ – ದೂರು

ಬೆಳ್ಳಾರೆ ಗ್ರಾಮದ ರಾಜೇಶ್ ಜಿ ಎಂಬವರು ನಿನ್ನೆ ಬೆಳಿಗ್ಗೆಯಿಂದ ಕಾಣೆಯಾಗಿರುವುದಾಗಿ ಅವರ ಪತ್ನಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಾರಿಗಾದರೂ ಇವರ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಬೆಳ್ಳಾರೆ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ. ದೂರವಾಣಿ ಸಂಖ್ಯೆ 95355 56173 , ಬೆಳ್ಳಾರೆ ಠಾಣೆ 08257-271995
Loading posts...

All posts loaded

No more posts

error: Content is protected !!