Ad Widget

ಮಡಪ್ಪಾಡಿ : ಮಹಿಳಾ ಕಾಯಕೋತ್ಸವ ವಿಶೇಷ ಸಭೆ

ಮಡಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ರೈತ ಬಂಧು ಅಭಿಯಾನ ಹಾಗೂ ಪೌಷ್ಟಿಕ ತೋಟ ವಿಶೇಷ ಅಭಿಯಾನ ಮಹಿಳಾ ಕಾಯಕೋತ್ಸವ ಆ.30 ರಂದು ಗ್ರಾಮ ಪಂಚಾಯಿತಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಿತ್ರದೇವ ಮಡಪ್ಪಾಡಿ ಇವರು ವಹಿಸಿದ್ದರು . ಸುಳ್ಯ ತಾಲೂಕು ಪಂಚಾಯಿತಿನ ಐಇಸಿ ಸಂಯೋಜಕರಾದ ನಮಿತಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕೆ ತಾಂತ್ರಿಕ ಅಭಿಯಂತರರಾದ ಕುಮಾರಿ ನಿಶಾ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಈ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಂಜೀವಿನಿ ಸ್ವಸಹಾಯ ಸಂಘದ ಎಲ್ಲಾ ಸದಸ್ಯರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು,ಪಂಚಾಯತ್ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!