ಬೂಡು ಭಗವತಿ ದೇವಸ್ಥಾನದಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘ ರಿ. ಬೂಡು-ಕೇರ್ಪಳ- ಕುರುಂಜಿಗುಡ್ಡೆ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸರಳವಾಗಿ ಜರುಗಿತು. ಸಂಘದ ಅಧ್ಯಕ್ಷರಾದ ವಾಸುದೇವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನ್ಮಾಷ್ಟಮಿ ಕಾರ್ಯಕ್ರಮವನ್ನು ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿ “ಕೃಷ್ಣನ ಜೀವನಗಾಥೆಯು ನಮ್ಮ ಜೀವನಕ್ಕೆ ಅನುಕರಣೀಯ, ಭಗವತಿ ಯುವ ಸೇವಾ ಸಂಘವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮವು ಇತರ ಸಂಘ ಸಂಸ್ಥೆಗಳಿಗೆ ಮಾದರಿ” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ ಮಾತನಾಡಿ “ಭಗವತಿ ಯುವ ಸೇವಾ ಸಂಘವು ಪ್ರತೀ ವರುಷವು ಆಚರಿಸುವ ಕಾರ್ಯಕ್ರಮವನ್ನು ಕೈ ಬಿಡದೇ ಸರಳವಾಗಿ ಆಚರಿಸುತ್ತಿದ್ದು, ಈ ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಮುಂದೆ ದೇಶದ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸುವಂತಾಗಲಿ” ಎಂದು ಹಾರೈಸಿದರು. ಶ್ರೀ ಶಾರದಾಂಬಾ ಸೇವಾ ಸಮಿತಿ ಇದರ ಅಧ್ಯಕ್ಷರಾದ ನಾರಾಯಣ ಕೇಕಡ್ಕ ಮಾತನಾಡಿ “ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಉಲ್ಲೇಖಿಸಿದ ಪ್ರತೀ ಮಾತುಗಳು ಪ್ರಸ್ತುತ ಕಾಲಘಟ್ಟದಲ್ಲಿ ಸತ್ಯವಾಗುತ್ತಿದೆ. ಈ ಕೊರೋನಾ ಮಹಾಮಾರಿಯು ತೊಲಗಿ ಲೋಕಕ್ಕೆ ನೆಮ್ಮದಿಯು ಬರಲಿ” ಎಂದರು. ಬಿಜೆಪಿ ಯುವ ಮೋರ್ಚಾದ ತಾಲೂಕು ಪ್ರದಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಮಾತನಾಡಿ “ಭಗವತಿ ಯುವ ಸೇವಾ ಸಂಘವು ಕೊರೋನಾ ಕಾಲದಲ್ಲಿಯೂ ನಿಷ್ಕ್ರಿಯಯವಾಗದೇ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಈ ಹಿಂದೆಯೂ ಅನೇಕ ಬಡವರಿಗೆ ಆಹಾರದ ಕಿಟ್ ಗಳನ್ನು ವಿತರಿಸಿತ್ತು. ಪ್ರತೀ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ” ಎಂದರು. ನಗರ ಪಂಚಾಯತ್ ಸದಸ್ಯ ಸುಧಾಕರ ಕುರುಂಜಿಭಾಗ್ ಶುಭಹಾರೈಸಿದರು. ಭಗವತಿ ಯುವ ಸೇವಾ ಸಂಘದ ಗೌರವಾಧ್ಯಕ್ಷರಾದ ಬೂಡು ರಾಧಾಕೃಷ್ಣ ರೈ ಉಪಸ್ಥಿತರಿದ್ದರು. 2020-21ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಅಮರ್ ಕೆ.ಪಿ. ಕೇರ್ಪಳ(615) ಮತ್ತು ಕೌಶಿಕ್ ರೈ ಬೂಡು(612) ಇವರನ್ನು ಸನ್ಮಾನಿಸಲಾಯಿತು. ನಿಮಿಷಾಂಬ ಮತ್ತು ಕುಕ್ಕೇಶ್ರೀ ನವೋದಯ ಸ್ವ ಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು. ಸ್ಪೂರ್ತಿ ಎಮ್. ರೈ ಪ್ರಾರ್ಥಿಸಿದರು. ಕುಸುಮಾಧರ ರೈ ಬೂಡು ಕಾರ್ಯಕ್ರಮ ನಿರೂಪಿಸಿದರು. ಮಹಾಬಲ ರೈ ಬೂಡು ವಂದಿಸಿದರು.
- Thursday
- November 21st, 2024