ಬಳ್ಪ: ಆದರ್ಶ ಗ್ರಾಮ ಬಳ್ಪದ ಎಡೋಣಿ-ಪಾದೆ ಬಳಿಯಲ್ಲಿ ಉದ್ಘಾಟನೆಗೊಂಡ ನೂತನ ಜಿಯೋ ಟವರ್ ಮೂಲಕ ಮೊಬೈಲ್ ಸಿಗ್ನಲ್ ಲಭ್ಯವಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಈಗ ನಿರಾಸೆಯಾಗಿದೆ.
ಉದ್ಘಾಟನೆಗೊಂಡ ಜೊಯೋ ಟವರ್ ಮೂಲಕ ಬಳ್ಪ ಪೇಟೆಯಲ್ಲಿಯೇ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲ ಮಾತ್ರವಲ್ಲ ತೀರಾ ಗ್ರಾಮೀಣ ಪ್ರದೇಶ ಎಂದು ಗುರುತಿಸಲಾಗಿದ್ದ ಎಡೋಣಿ-ಪಾದೆ ಪರಿಸರ ದಿಂದ ಸ್ವಲ್ಪ ದೂರದಲ್ಲಿಯೇ ಇರುವ ಮಲ್ಕಜೆ, ಏರಣಗುಡ್ಡೆ ಪ್ರದೇಶದಲ್ಲೀ ಜಿಯೋ ಸಿಗ್ನಲ್ ಲಭ್ಯವಾಗುತ್ತಿಲ್ಲ ಎಂದು ಗ್ರಾಹಕರು ನಿರಾಸೆ ವ್ಯಕ್ತಪಡಿಸಿದ್ದಾರೆ.
ಎಡೋಣಿಯಿಂದ ಸ್ವಲ್ಪ ದೂರವರೆಗೆ ಸಿಗ್ನಲ್ ಲಭ್ಯವಾಗುತ್ತದೆ, ಈ ಹಿಂದೆಯೇ ಆ ಪ್ರದೇಶದಲ್ಲಿ ಸಿಗ್ನಲ್ ಇತ್ತು. ಈಗ ಹೊಸದಾಗಿ ಟವರ್ ಆದ ಬಳಿಕ ಮಲ್ಕಜೆಯವರೆಗೆ ಸಿಗ್ನಲ್ ಲಭ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೆವು. ಇದೀಗ ನಿರಾಸೆಯಾಗಿದೆ ಎಂದು ಮೊಬೈಲ್ ಗ್ರಾಹಕ ಬಿಟ್ಟಿ ಬಿ ನೆಡುನೀಲಂ ಹೇಳಿದ್ದಾರೆ. ತಕ್ಷಣವೇ ಸಂಬಂಧಿತ ಕಂಪನಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಭಾಗಗಳಲ್ಲೂ ಸಿಗ್ನಲ್ ಸಿಗುವಂತಾಗಬೇಕು ಎಂದು ಬಿಟ್ಟಿ ಬಿ ನೆಡುನೀಲಂ ಹೇಳಿದ್ದಾರೆ.