ಸರಕಾರ ಮೂಲಭೂತ ಸೌಕರ್ಯವಿಲ್ಲದವರಿಗೆ ಬೇಕಾದ ವ್ಯವಸ್ಥೆ ಯನ್ನು ಮಾಡಲು ಬದ್ದವಾಗಿದೆ. ಆದರೆ ಜನರು ಮಂಜೂರಾದ ನಿವೇಶನವನ್ನು ಮಾರಾಟ ಮಾಡದೇ ಅದರ ಸದುಪಯೋಗ ಪಡೆಯಬೇಕು ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.
ಸುಳ್ಯ ತಾ.ಪಂ.ಸಭಾಂಗಣದಲ್ಲಿ ಸಾಗುವಳಿ ಚೀಟಿ ವಿತರಣೆ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಹಕ್ಕುಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಗ್ರಾಮೀಣ ನಿವೇಶನದಿಂದ 36 ಹಾಗೂ ಕಂದಾಯ ಇಲಾಖೆಯಿಂದ 46 ಮಂದಿಗೆ ಹಕ್ಕುಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಅನಿತಾಲಕ್ಷ್ಮಿ, ತಾ.ಪಂ.ಇಒ ಎನ್.ಭವಾನಿಶಂಕರ್, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಗುಣವತಿ ಕೊಲ್ಲಂತ್ತಡ್ಕ , ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಜಾಹ್ನವಿ ಕಾಂಚೋಡು, ಹರೀಶ್ ಕಂಜಿಪಿಲಿ, ಚನಿಯ ಕಲ್ತಡ್ಕ, ಸುಬೋದ್ ಶೆಟ್ಟಿ ಮೇನಾಲ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.