Ad Widget

ಸುಳ್ಯ : ಗ್ರಂಥಾಲಯ ಮೇಲ್ವಿಚಾರಕರ ಸಭೆ

ಸುಳ್ಯ ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಭೆಯ ಆ 27ರಂದು ತಾಲೂಕು ಪಂಚಾಯತ್ ಮಿನಿ ವಿಧಾನಸೌಧದಲ್ಲಿ ನಡೆಯಿತು. ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ರವರು ಗ್ರಂಥಾಲಯದ ಡಿಜಿಟಲೀಕರಣ ಮತ್ತು ಬೇಕನ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಸುಳ್ಯ ತಾಲೂಕಿನ 10 ಗ್ರಂಥಾಲಯವನ್ನು ತಕ್ಷಣ ಡಿಜಿಟಲೀಕರಣ ಗೊಳಿಸುವಂತೆ ಕಾರ್ಯಪ್ರವರ್ತರಾಗಲು ತಿಳಿಸಿದರು. ತಾಲೂಕಿನ 25 ಗ್ರಂಥಾಲಯವನ್ನು ಡಿಜಿಟಲೀಕರಣ ಗೊಳಿಸುವಂತೆ ಪಿಡಿಓಗಳಿಗೆ ಮತ್ತು ಮೇಲ್ವಿಚಾರಕರಿಗೆ ಮಾಹಿತಿ ನೀಡಿ ಮೇಲ್ವಿಚಾರಕರ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ಆಲಿಸಿ ಆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಪಿ.ಕೆ.ಸ್ವಾಗತಿಸಿ, ನಿರೂಪಿಸಿದರು.

. . . . . . .


ನಂತರ ಸುಳ್ಯ ತಾಲೂಕು ಶಾಖಾ ಗ್ರಂಥಾಲಯಕ್ಕೆ ಮುಖ್ಯ ಗ್ರಂಥಾಲಯಾಧಿಕಾರಿಗಳು ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿ ವರ್ಗದವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಂಥಾಲಯಾಧಿಕಾರಿಯವರಿಗೆ ಸುಳ್ಯ ತಾಲೂಕು ಮೇಲ್ವಿಚಾರಕ ನೌಕರರ ಸಂಘದ ಅಧ್ಯಕ್ಷೆ ಸಾವಿತ್ರಿ ರಾಮ್ ಕಣೆಮರಡ್ಕರವರು ಪುಸ್ತಕ ನೀಡಿ ಗೌರವಿಸಿದರು. ಜಯಂತಿ, ಪ್ರಣಿತ ,ಕಾವ್ಯರವರು ತಾಲೂಕಿನ ಎಲ್ಲಾ ಗ್ರಂಥಾಲಯದ ದಾಖಲೆಗಳ ಪರಿಶೀಲನೆ ನಡೆಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!