
ದರ್ಖಾಸ್ತು ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಸಭೆಯು ಆ.26ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಎಸ್.ಡಿ.ಎಂ.ಸಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಹರೀಶ್.ಡಿ, ಉಪಾಧ್ಯಕ್ಷೆಯಾಗಿ ಭವಾನಿ, ಸದಸ್ಯರಾಗಿ ಗೀತಾ, ಸುಜಾತ, ಸಂಜೀವ, ಹಸೀನಾ, ನುಸೈಬಾ, ಜಯಶ್ರೀ, ಬಾಲಕೃಷ್ಣ, ಗಿರಿಜ, ಸುಜಾತ.ಬಿ, ಸುಜಾತ, ಕಲಾ, ಜಯಂತಿ, ಜಾನ್ ಪಾಲ್, ಗಾಯತ್ರಿ, ಜನಾರ್ಧನ ಹಾಗೂ ಶಾರದಾ ಇವರನ್ನು ಆಯ್ಕೆ ಮಾಡಲಾಯಿತು. ನಾಮನಿರ್ದೇಶಿತ ಸದಸ್ಯರಾಗಿ ಅನಿಲ್ ರೈ, ವೀಣಾಕುಮಾರಿ.ಕೆ ಹಾಗೂ ಕೃತೀಯಾ ಇವರುಗಳನ್ನು ಆಯ್ಕೆ ಮಾಡಲಾಯಿತು. ಪದನಿಮಿತ್ತ ಸದಸ್ಯರಾಗಿ ಪಲ್ಲವಿ.ಪಿ, ವಸಂತಿ, ಅಂಜು ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಭವ್ಯ, ಮಣಿಕಂಠ, ಅನಿಲ್ ರೈ ಉಪಸ್ಥಿತರಿದ್ದರು.