ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೇವಾ ಭಾರತಿ ಬೆಳ್ಳಾರೆ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಮಂಗಳೂರು ಮತ್ತು ಸುಳ್ಯ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು, ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.), ಸೆಂಚುರಿ ಗ್ರೂಪ್ಸ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವು ಆ.29ರಂದು ದರ್ಖಾಸ್ತು ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಮಾತನಾಡಿ ಪ್ರಧಾನಮಂತ್ರಿಗಳ ಅನೇಕ ಜನಪರ ಯೋಜನೆಗಳು ಅರ್ಹ ವ್ಯಕ್ತಿಗೆ ತಲುಪಿಸುವಲ್ಲಿನ ಅತ್ಯುತ್ತಮ ವ್ಯವಸ್ಥೆ ಶ್ಲಾಘನೀಯ. ಸರ್ಕಾರದ ದಿಟ್ಟ ಹೆಜ್ಜೆಯ ನಿರ್ಧಾರಗಳು ಜನಸೇವೆಗೆ ಪೂರಕವಾಗಿದೆ, ಇಂತಹ ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರಗಳಿಗೆ ಸರ್ಕಾರದ ಸಹಕಾರ ಎಂದಿಗೂ ಇರಲಿದೆ ಎಂದರು.
ವೇದಿಕೆಯಲ್ಲಿ ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ, ಆರಕ್ಷಕ ಠಾಣೆ ಬೆಳ್ಳಾರೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ದರ್ಖಾಸ್ತು ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಲ್ಲವಿ, ಬೆಳ್ಳಾರೆ ಅಜಪಿಲ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಪನ್ನೆ ಉಪಸ್ಥಿತರಿದ್ದರು. ಸೇವಾಭಾರತಿ ಬೆಳ್ಳಾರೆಯ ರಾಮಕೃಷ್ಣ ಭಟ್ ಕುರುಂಬುಡೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಐವರ್ನಾಡು ಮುತ್ತುಮಾರಿಯಮ್ಮ ದೇವಾಲಯದ ಅಧ್ಯಕ್ಷ ನಟರಾಜನ್.ಡಿ.ಆರ್ ವಂದಿಸಿದರು. ಕನ್ನದಾಸನ್ ಸ್ವಾಗತಿಸಿ, ನಿರೂಪಿಸಿದರು.