ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡಿನ ಕೋರ್ಟ್ ಬಳಿಯಿಂದ ಕುರುಂಜಿ ಗುಡ್ಡೆಗೆ ಹೋಗುವ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಯು 20 ಲಕ್ಷ ರೂ ವೆಚ್ಚದಲ್ಲಿ ಆರಂಭಗೊಂಡಿದ್ದು ಕಾಮಗಾರಿಯ ಗುದ್ದಲಿಪೂಜೆ ಈ ದಿನ ನಡೆಯಿತು. 10ನೇ ವಾರ್ಡಿನ ಸದಸ್ಯ ಹಾಗೂ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಸುಳ್ಯದ ಶಾಸಕರ ಪ್ರಯತ್ನದಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 2 ಕೋಟಿ ರು ವೆಚ್ಚದಲ್ಲಿ ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗೊಳ್ಳುತ್ತಿದ್ದು ಈ ರಸ್ತೆಯು 20 ಲಕ್ಷ ರೂ ವೆಚ್ಚದಲ್ಲಿ 300 ಮೀಟರ್ ನಷ್ಟು ಕಾಂಕ್ರೀಟಿಕರಣ ಗೊಳ್ಳುತ್ತಿದೆ. 10ನೇ ವಾರ್ಡ್ನಲ್ಲಿ ಕಳೆದೆರಡು ವರ್ಷಗಳಲ್ಲಿ 70 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿರುತ್ತದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸಚಿವರಾದ ಎಸ್ ಅಂಗಾರ ಅವರ ನೇತೃತ್ವದಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕಸದ ಸಮಸ್ಯೆಗೆ ಶಾಶ್ವತ ವಾದಂತ ಪರಿಹಾರ, ನಗರದ ನೀರು ಸರಬರಾಜಿಗೆ ಶಾಶ್ವತವಾದ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಮುಖ್ಯ ಅಧಿಕಾರಿ ಎಂ ಆರ್ ಸ್ವಾಮಿ , ಪಂಚಾಯತ ಸದಸ್ಯರುಗಳಾದ ಸುಧಾಕರ್ ಶ್ರೀಮತಿ ಪ್ರವಿತ, ಶ್ರೀಮತಿ ಶೀಲಾ ಕುರುಂಜಿ, ಮಾಜಿ ಸದಸ್ಯರುಗಳಾದ ಗೋಪಾಲ ನಡುಗಳು ಮೋಹಿನಿ ಕುರುಂಜಿ ಗುಡ್ಡೆ ಕಿರಣ್ ಕುರುಂಜಿ, ಸ್ಥಳೀಯರಾದ ಗುರುಮೂರ್ತಿ ಬಾಲಕೃಷ್ಣ ಮಣಿಯಾಣಿ, ಕಮಲಾಕ್ಷ ಮನೋಜ್ ಕೇರ್ಪಳ, ದಯಾನಂದ ಕೇರ್ಪಳ, ಜಿನ್ನಪ್ಪ ಪೂಜಾರಿ, ಪ್ರಶಾಂತ್ ಕಾಯರ್ತೋಡಿ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಶೇಖರ್ ಕೇರ್ಪಳ ಸ್ವಾಗತಿಸಿ ವಂದಿಸಿದರು.
- Thursday
- November 21st, 2024