Ad Widget

ಕೊಲ್ಲಮೊಗ್ರು : ಗ್ರಾಮ ಪಂಚಾಯತ್ ನಲ್ಲಿ ಜಮಾಬಂದಿ

ಕೊಲ್ಲಮೊಗ್ರು ಗ್ರಾಮಪಂಚಾಯತ್ ನ 2020-21 ನೇ ಸಾಲಿನ ಜಮಾಬಂದಿಯು ಆ.26 ರಂದು ಕೊಲ್ಲಮೊಗ್ರು ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ.ಎನ್ ಜಮಾಬಂದಿ ಅಧಿಕಾರಿಯಾಗಿ ಜಮಾಬಂದಿ ಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರಾದ ಪುಷ್ಪರಾಜ್ ಪಡ್ಪು ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸುಳ್ಯ ಕಿರಿಯ ಅಭಿಯಂತರರಾದ ಜನಾರ್ಧನ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಪಂಚಾಯತ್ ಪಿಡಿಓ ರವಿಚಂದ್ರ.ಎ ಸ್ವಾಗತಿಸಿ ವಂದಿಸಿದರು. ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ, ಗ್ರಾಮಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ಗಡಿಕಲ್ಲು, ವಸಂತ ಕೊರಂಬಟ, ನವ್ಯ ನಡುಗಲ್ಲು, ಲೀಲಾವತಿ ಶಿರೂರು, ಮಮತಾ ಮರಕತ, ಆಶೀಶ್ ಕಟ್ಟೆಮನೆ, ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರುಗಳಾದ ವಿಮಲಾಕ್ಷಿ ಗೋಳ್ಯಾಡಿ, ಲೀಲಾವತಿ ತಂಬಿನಡ್ಕ, ಸುನಂದಾ, ಅರ್ಪಿತಾ, ಪಾರ್ವತಿ ಹಾಗೂ ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!