ಕರ್ನಾಟಕ ಅರೆಬಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಅಂದಾಜು 30000/- ಮೊತ್ತದ ವಾದ್ಯ ಪರಿಕರಗಳನ್ನು ಕಡಬ ತಾಲೂಕಿನ ಏನೆಕಲ್ ನಿವಾಸಿ ಪ್ರವೀಣ್ ಇವರಿಗೆ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರಾದ ಪುರುಷೋತ್ತಮ ಕರಂಗಲ್ಲು, ಕುಸುಮಾದರ ಎ.ಟಿ, ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ,ಪುರುಷೋತ್ತಮ ಕಿರ್ಲಾಯ ಇವರು ಉಪಸ್ಥಿತರಿದ್ದರು. ಅಲ್ಲದೆ ಊರಿನ ಪ್ರಮುಖರಾದ ಮಾಜಿ ಅಕಾಡೆಮಿ ಸದಸ್ಯರಾದ ಕಾರ್ಯಪ್ಪ, ತುಕಾರಾಂ ಏನೆಕಲ್,ಶಿವರಾಮ ಏನೆಕಲ್,ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಕೋಟಿ ಗೌಡನ ಮನೆ,ಭರತ್ ನೆಕ್ರಾಜೆ,ಮನುದೇವ್ ಪರಮಲೆ,ಪುಟ್ಟಣ್ಣ ಗೌಡ ಬೂದಿಪಳ್ಳ, ಪುನೀತ್ ಕನಾಜೆ,ಪ್ರಶಾಂತ್ ದೋಣಿ,ಅಶೋಕ್ ಅಂಬೆಕಲ್,ಸಚಿನ್ ಚಿದ್ಗಲ್,ಸಾತ್ವಿಕ್ ಚಿದ್ಗಲ್,ಹಾಗೂ ಫಲಾನುಭವಿ ಪ್ರವೀಣ್ ಇವರ ಮನೆಯವರು ಉಪಸ್ಥಿತರಿದ್ದರು.
ಶಿಕ್ಷಕರಾದ ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು. ಶಿವರಾಮ್ ಏನೆಕಲ್ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ವಿಜಯಕುಮಾರ್ ಮಾಡಿದರು.