ಬೆಳ್ಳಾರೆಯ ಕೆಳಗಿನ ಪೇಟೆಯ ಹಿರಿಯ ಉದ್ಯಮಿ, ಶ್ರೀ ಗುರುರಾಘವೇಂದ್ರ ಸ್ಟೋರ್ಸ್ ನ ಚಂದ್ರಶೇಖರ ಶೆಣೈ ಆ.19ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಚಿತ್ರ ಶೆಣೈ, ಪುತ್ರರಾದ ಚೇತನ್ ಶೆಣೈ, ಶ್ರೀ ಗುರುರಾಘವೇಂದ್ರ ಸ್ಟೋರ್ಸ್ ನಡೆಸುತ್ತಿರುವ ಜೇಸೀ ಬೆಳ್ಳಾರೆಯ ಪೂರ್ವಾಧ್ಯಕ್ಷ ಮಿಥುನ್ ಶೆಣೈ, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
- Thursday
- November 21st, 2024