

ಕಳಂಜ ನಿವಾಸಿ ಬಾಬು ಪೂಜಾರಿ ಕಳಂಜ ಹೃದಯಾಘಾತದಿಂದ ಆ.15ರಂದು ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಭವಾನಿ, ಪುತ್ರ ಸುಧೀರ್, ಪುತ್ರಿಯರಾದ ಶ್ರೀಮತಿ ಜಯಶ್ರೀ, ಶ್ರೀಮತಿ ಸುಜಾತ ಈಶ್ವರಮಂಗಲ, ಶ್ರೀಮತಿ ವಿಜಯಶ್ರೀ ಬೆಂಗಳೂರು ಹಾಗೂ ಸಹೋದರರಾದ ಆನಂದ ಪೂಜಾರಿ ಕಳಂಜ, ಐತ್ತಪ್ಪ ಪೂಜಾರಿ ಕಳಂಜ, ಸುಂದರ ಪೂಜಾರಿ ಸಜೀಪ ಮೇಲ್ಕಾರ್, ಸಹೋದರಿಯರಾದ ಶ್ರೀಮತಿ ಕಮಲ ಕೆಯ್ಯೂರು, ಶ್ರೀಮತಿ ಪುಷ್ಪಾವತಿ ಪೆರ್ಲಂಪಾಡಿ, ಶ್ರೀಮತಿ ಪ್ರೇಮಲತಾ ಬಳ್ಪ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.