


ಸ್ನೇಹ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.16 ರಂದು ನಡೆಯಿತು. 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ 14 ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ತುಷಾರ್ ಡಿ.ಕೆ, ಶಿವಶರಣ ಹೊಳ್ಳ ಎನ್, ಹಯನ ಎ. ಪಿ ಹಾಗೂ ಚಿನ್ಮಯಿ ಕೆ. ಜಿ ಮಾತನಾಡಿದರು. ಬಳಿಕ ಸಂಸ್ಥೆಯ ಶಿಕ್ಷಕರಾಗಿರುವ ದೇವಿಪ್ರಸಾದ ಜಿ. ಸಿ ಜಯಂತಿ ಕೆ ಪ್ರತಿಮಕುಮಾರಿ ಕೆ. ಎಸ್ ರೇಷ್ಮಾ ಎಂ. ಆರ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಪೋಷಕರ ನೆಲೆಯಲ್ಲಿ ಶಿಕ್ಷಕಿ ಸವಿತಾ ಎಂ ಇವರು ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಸಿಕ್ಕಿದ ಪ್ರೋತ್ಸಾಹ ಪ್ರೇರಣೆಯನ್ನು ಸ್ಮರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿ “ಸಂಸ್ಥೆಯ ಮೌಲ್ಯಗಳನ್ನು ಮುಂದೆಯೂ ಜೀವನದಲ್ಲಿ ಅಳವಡಿಸಿಕೊಂಡು ಪ್ರಜೆಗಳಾಗಿ ಬಾಳಬೇಕು” ಎಂದು ಹೇಳಿದರು. ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸಾಧಕರಾಗಬೇಕಾದರೆ ಪರಿಶ್ರಮ ಪಡಲೇಬೇಕು. ಅನ್ಯರಿಗಾಗಿ ಸಾಧಿಸದೆ ತನಗಾಗಿ ಸಾಧನೆ ಮಾಡಬೇಕು. ಆ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು” ಎಂದರು.
ಶಿಕ್ಷಕ ದೇವಿಪ್ರಸಾದ ಜಿ. ಸಿ ಸ್ವಾಗತಿಸಿ, ಜಯಂತಿ ಕೆ ವಂದಿಸಿದರು. ಸವಿತಾ ಯಂ ನಿರೂಪಿಸಿದರು.