ಅರೋಗ್ಯ ಇಲಾಖೆಯಿಂದ ಜನವರಿ 2021ರಿಂದ ಜೂನ್ 2021ರ ವರೆಗೆ ಕೋವಿಡ್ ಪಾಸಿಟಿವ್ ಬಂದು ಕೋವಿಡ್ ಗುಣಮುಖರಾದ ಜನರಿಗೆ ಮತ್ತು ಮನೆಯ ಸದಸ್ಯರಿಗೆ ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನವನ್ನು ಆ.16 ರಿಂದ 31 ರವರೆಗೆ ಹಮ್ಮಿಕೊಳ್ಳಲಾಗಿದ್ದು ಇಲಾಖೆಯ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತರು ಜನವರಿ 2021 ರಿಂದ ಜೂನ್ 2021 ರವರೆಗೆ ಕೋವಿಡ್ ಪಾಸಿಟಿವ್ ಬಂದ ಜನರ ಮನೆ ಭೇಟಿ ಮಾಡಿ ಕ್ಷಯ ರೋಗ ಪತ್ತೆ ಸರ್ವೇ ಕಾರ್ಯಕ್ರಮ ನಡೆಸಲಿದ್ದು ಕೋವಿಡ್ ಪಾಸಿಟಿವ್ ಬಂದ ಮನೆಯವರು ಸಹಕಾರ ನೀಡಿ ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನವನ್ನು ಸುಳ್ಯ ತಾಲೂಕಿನಲ್ಲಿ ಯಶಸ್ವಿಗೊಳಿಸಬೇಕೆಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಮನವಿ ಮಾಡಿದ್ದಾರೆ.
- Thursday
- November 21st, 2024