
ಬೆಳ್ಳಾರೆ ಗ್ರಾಮದ ತಡಗಜೆ ವಾರ್ಡಿನ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವು ತಡಗಜೆ ಅಂಗನವಾಡಿಯಲ್ಲಿ ವಾರ್ಡಿನ ಎಲ್ಲಾ ಪ್ರಮುಖರ ಸಮ್ಮುಖದಲ್ಲಿ ಮೊಟ್ಟ ಮೊದಲನೇ ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಧ್ವಜಾರೋಹಣವನ್ನು ವಾರ್ಡ್ ಸದಸ್ಯೆ ಜಯಶ್ರೀ ನೆರವೇರಿಸಿದರು. ಬಳಿಕ ತಡಗಜೆಯಿಂದ ಬೆಳ್ಳಾರೆ ತನಕ ಸ್ವಾತಂತ್ರ್ಯೋತ್ಸವ ನಡಿಗೆ ನಡೆಯಿತು.


