Ad Widget

ಕಳಂಜ ಬುಖಾರಿಯ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬುಖಾರಿಯ ಜುಮಾ ಮಸೀದಿ ಕಳಂಜ ಇದರ ವತಿಯಂದ 75ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಜಮಾಲ್.ಎ.ಕೆ ಯವರು ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮಸೀದಿ ಧರ್ಮಗುರುಗಳು ದುವಾ ನೆರವೇರಿಸಿದರು. ಮದರಸ ಶಾಲಾ ಮಕ್ಕಳು ರಾಷ್ಟ್ರಗೀತೆಯನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಅಬ್ದುಲ್ ಲತೀಫ್, ಇಬ್ರಾಹಿಂ ಹಾಜಿ, ಇಸ್ಮಾಯಿಲ್.ಪಿ.ಎಸ್, ಮಹಮ್ಮದ್.ಕೆ.ಎಂ, ಮೊಯ್ದೀನ್.ಎ.ಬಿ, ಅಬ್ದುಲ್ ಅಝೀಝ್.ಟಿ, ಅಬ್ದುಲ್ ಅಝೀಝ್.ಕೆ, ಅಬೂಬಕರ್,ಮಹಮ್ಮದ್ ಮೊದಲಾದವರು ಭಾಗವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅಲ್ ಫಲಹ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!