

ಬೆಳ್ಳಾರೆ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಕಳಂಜ ಗ್ರಾಮದ ತಂಟೆಪ್ಪಾಡಿ-ನಾಲ್ಗುತ್ತು ಭಾಗಕ್ಕೆ ಕೋವಿಡ್ ಪರೀಕ್ಷೆಗೆ ತೆರಳಿದ್ದು ತಂಟೆಪ್ಪಾಡಿ-ನಾಲ್ಗುತ್ತು ರಸ್ತೆ ತೀರಾ ಹದಗೆಟ್ಟ ಕಾರಣ ವಾಹನ ಹೋಗದೆ ಸ್ವಾಬ್ ಪರೀಕ್ಷೆಗೆ ನಡೆದುಕೊಂಡು ಹೋಗುವಂತಾಯಿತು. ಈ ರಸ್ತೆಯ ದುಸ್ಥಿತಿಯಿಂದ ಈ ಭಾಗದ ಜನರು ಹಲವಾರು ವರ್ಷಗಳಿಂದ ಇದೇ ಗೋಳು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರಾದ ಲೋಕೇಶ್ ತಂಟೆಪ್ಪಾಡಿಯವರು ಪ್ರಧಾನಿಯವರಿಗೆ ಈ ಹಿಂದೆಯೇ ಪತ್ರ ಬರೆದಿದ್ದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವರು ಸ್ಥಳ ಸಮೀಕ್ಷೆ ನಡೆಸಿ ರಸ್ತೆ ಕಾಂಕ್ರೀಟಿಕರಣಕ್ಕೆ ಅಗತ್ಯವಿರುವ 40 ಲಕ್ಷ ಅನುದಾನಕ್ಕೆ ಜಿಲ್ಲಾ ಪಂಚಾಯತ್ ಗೆ ಕಳುಸಿದ್ದು ಜಿಲ್ಲಾ ಪಂಚಾಯತ್ ನಿಂದ ಸರಕಾರಕ್ಕೆ ಕಳುಹಿಸಲಾಗಿದ್ದರೂ ರಸ್ತೆಯ ಅಭಿವೃದ್ಧಿ ಮರೀಚಿಕೆಯಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ರಸ್ತೆಯ ಅಭಿವೃದ್ಧಿ ಕಡೆಗೆ ಗಮನಹರಿಸಬೇಕಾಗಿದೆ.