ಮಿತ್ತಮಜಲಿನಲ್ಲಿ ಬಿ.ಎಸ್.ಎನ್.ಎಲ್.ಟವರ್ ನಿರ್ಮಾಣವಾಗಿದ್ದರೂ ಕಾರ್ಯಾರಂಭ ಮಾಡಿರಲಿಲ್ಲ. ಇದರಿಂದ ಬೇಸತ್ತ ಸ್ಥಳಿಯರು ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿ ಬಳಿಕ ಸಚಿವರ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಂಡರು.
ಮಿತ್ತಮಜಲುವಿನಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆ ಬಿ.ಎಸ್.ಎನ್.ಎಲ್.ಟವರ್ ನಿರ್ಮಾಣಗೊಂಡಿದ್ದರೂ ಅದಕ್ಕೆ ವಿದ್ಯುತ್ ಸಂಪರ್ಕ ಹಾಗೂ ನೆಟ್ ವರ್ಕ್ ಕನೆಕ್ಷನ್ ನೀಡಿರಲಿಲ್ಲ. ಇದರಿಂದಾಗಿ ಇಲ್ಲಿನ ಬಹುಸಂಖ್ಯಾತ ಬಿಎಸ್ ಎನ್ ಎಲ್ ಸಂಪರ್ಕ ಹೊಂದಿರುವವರು ನೆಟ್ ವರ್ಕ್ ಇಲ್ಲದೇ ಪರದಾಡುವಂತಾಗಿತ್ತು. ಇಷ್ಟೆಲ್ಲಾ ಸಮಸ್ಯೆಯಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಯಾವುದೇ ಪರಿಹಾರ ಕೈಗೊಳ್ಳದಿರುವ ಆಕ್ರೋಶಗೊಂಡು ಬಿಎಸ್ ಎನ್ ಎಲ್ ಹಾಗೂ ಸರಕಾರದ ವಿರುದ್ದ ಟವರ್ ಹೋರಾಟ ಸಮಿತಿ ಹಾಗೂ ಊರ ನಾಗರಿಕರು ಸೇರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಸಚಿವರಿಂದ ಭರವಸೆ: ಎಸ್.ಅಂಗಾರರು ಮುಂದಿನ ಮೂರು ತಿಂಗಳೊಳಗೆ ಇಲ್ಲಿನ ನೆಟ್ ವರ್ಕ್ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಸದ್ಯ ಅಂತ್ಯಗೊಳಿಸಲಾಗಿದೆ. ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಅವರು ಟವರ್ ಸಮಸ್ಯೆಯ ಕುರಿತು ಸತ್ಯಾಗ್ರಹ ನಿರತರಿಂದ ಮನವಿ ಸ್ವೀಕರಿಸಿದರು.
ಈ ಸಂದರ್ಭ ಟವರ್ ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು , ಸಾಮಾಜಿಕ ಹೋರಾಟಗಾರ ಸತ್ಯಶಾಂತಿ ತ್ಯಾಗಮೂರ್ತಿ , ಮಾಜಿ ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಪ್ರಸಾದ್ ಕುಕ್ಕಂದೂರು, ಈಶ್ವರ ನಾಯ್ಕ ಸೋಣಂಗೇರಿ, ಶ್ರೀಮತಿ ದೀಪಾ ಅಜಕಳಮೂಲೆ, ಮಾಜಿ ಗ್ರಾ.ಪಂ. ಸದಸ್ಯ ಸುಬ್ಬಯ್ಯ ನಾಯರ್ ಹಿತ್ಲು, ಚಿದಾನಂದ ಕುಕ್ಕಂದೂರು,ನಿವೃತ್ತ ತೋಟಗಳ ಅಧೀಕ್ಷಕ ಗಂಗಾಧರ ರೈ ಸೋಣಂಗೇರಿ, ಎಸ್.ಎನ್.ಗೋಪಾಲಕೃಷ್ಣ ಸುತ್ತುಕೋಟೆ, ಉದಯಕುಮಾರ್ ಸುಡುಕೇರಿ, ಭಾಸ್ಕರ ಸೋಣಂಗೇರಿ, ಭವಿತ್ ಬೇಲ್ಯ, ಜಯಪ್ರಕಾಶ್ ಗೋಂಟಡ್ಕ, ವರ್ಷಿತ್ ನಾಯರ್ ಹಿತ್ಲು, ಪ್ರಶಾಂತ್ ಮಿತ್ತಮಜಲು, ಶ್ಯಾಮ್ ಸುಂದರ್ ಮಿತ್ತಮಜಲು, ಪ್ರಸಾದ್ ಮಿತ್ತಮಜಲು, ನಿರಂಜನ ಮಿತ್ತಮಜಲು, ಸುರೇಶ್ ಕುಲಾಲ್ ಸೋಣಂಗೇರಿ, ಧನಂಜಯ ರೈ ಬೇಲ್ಯ, ಯೋಗೀಶ್ ಎಸ್.ಕೆ. ಸೋಣಂಗೇರಿ ಸೇರಿದಂತೆ ಊರನಾಗರಿಕರು ಉಪಸ್ಥಿತರಿದ್ದರು.