Ad Widget

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಗೆ ನಮ್ಮದೊಂದು ಸಲಾಂ :: ಐಎಎಸ್ ಅಧಿಕಾರಿಯಾಗುವೆ: ಅನನ್ಯಾ :: ವೈದ್ಯೆಯಾಗುವ ಹಂಬಲ ನನ್ನದು : ವೆನಿಸ್ಸಾ ಶರಿನಾ

ಕಡಬ ತಾಲೂಕಿನ ರಾಜ್ಯದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಅನನ್ಯಾ ಎಂ.ಡಿ ಮತ್ತು ವೆನಿಸ್ಸಾ ಶರಿನಾ ಡಿಸೋಜಾ ೨೦೨೦-೨೧ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಈ ಮೂಲಕ ಗ್ರಾಮೀಣ ಪ್ರದೇಶ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಈ ಸಾಧನೆ ಮೆರೆಯುವ ಮೂಲಕ ಹೆಮ್ಮೆ ಎನಿಸಿದ್ದಾರೆ.

. . . . . . .
ವೆನಿಸ್ಸಾ ಶರಿನಾ ಡಿಸೋಜಾ

ಅನನ್ಯಾ.ಎಂ.ಡಿ 625 ಅಂಕ:
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾರ್ಥಿನಿ ಅನನ್ಯಾ ಎಂ.ಡಿ ಅವರು ಗುತ್ತಿಗಾರಿನ ವಳಲಂಬೆಯ ಮಣಿಯಾನ ಮನೆ ದುರ್ಗೇಶ್ ಹಾಗೂ ವೇದಾವತಿ ದಂಪತಿಗಳ ಪುತ್ರಿ.

ಐಎಎಸ್ ಅಧಿಕಾರಿಯಾಗುವೆ: ಅನನ್ಯಾ
ಸತತ ಪ್ರಯತ್ನದಿಂದ ಅಂಕಗಳಿಕೆಗೆ ಪೂರಕವಾಯಿತು. ಕೊರೋನಾ ಕಾರಣದಿಂದ ತರಗತಿಗಳು ಸ್ಥಗಿತವಾದಾಗ ಕೂಡಾ ಪ್ರಯತ್ನ ಬಿಡದೆ ಅಧ್ಯಾಯನ ನಡೆಸುತ್ತಿದ್ದೆ.ವಿದ್ಯಾಲಯದಲ್ಲಿ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಅವರು ಆನ್‌ಲೈನ್ ತರಗತಿ ಮೂಲಕ ಹೆಚ್ಚಿನ ಜ್ಞಾನ ನೀಡುತ್ತಿದ್ದರು.ಬೆಳಗ್ಗೆ ಬೇಗನೆ ಎದ್ದು ಓದುತ್ತಿದ್ದೆನು.ಪೋಷಕರು ಕೂಡಾ ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದರು.ಆಬ್ಜೆಕ್ಟಿವ್ ಮಾಧರಿಯ ಪ್ರಶ್ನೆಗಳನ್ನು ಪ್ರಥಮ ಬಾರಿಗೆ ಎದುರಿಸಿದ ಕಾರಣ ಸ್ವಲ್ಪ ಅಳುಕು ಉಂಟಾಗುತ್ತಿತ್ತು.ಹಾಗಿದ್ದರೂ ಯಾವುದೇ ಒತ್ತಡವಿಲ್ಲದೆ ಪರೀಕ್ಷೆ ಬರೆದಿದ್ದೇನೆ.ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಸ್ವಪ್ರಯತ್ನ ಮತ್ತು ಶಿಕ್ಷಕರ ಸಹಕಾರದಿಂದ ಅಧಿಕ ಅಂಕ ಪಡೆಯುವಂತಾಗಿದೆ.ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಿ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ನನ್ನದು ಎಂದು ಅನನ್ಯಾ ಎಂ.ಡಿ ಅನಿಸಿಕೆ ವ್ಯಕ್ತಪಡಿಸಿದ್ದಾಳೆ.

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ವೆನಿಸ್ಸಾ ಶರಿನಾ ಡಿಸೋಜಾ 625 ಅಂಕ
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾರ್ಥಿನಿ ವೆನಿಸ್ಸಾ ಶರಿನಾ ಡಿಸೋಜಾ ಅವರು ಸುಬ್ರಹ್ಮಣ್ಯದ ಉದ್ಯಮಿ ವೆಲೇರಿಯನ್ ಡಿಸೋಜಾ ಮತ್ತು ತೆರೆಸಾ ಡಿಸೋಜಾ ದಂಪತಿಗಳ ಪುತ್ರಿ.

ವೈದ್ಯೆಯಾಗುವ ಹಂಬಲ ನನ್ನದು : ವೆನಿಸ್ಸಾ ಶರಿನಾ
625 ರಲ್ಲಿ 625 ಅಂಕ ಪಡೆದುದು ತುಂಬಾ ಸಂತಸವಾಗಿದೆ ಅಲ್ಲದೆ ಸಂತಸದಲ್ಲಿ ಮಾತೇ ಬರುತ್ತಿಲ್ಲ.625 ಅಂಕ ಬರಬಹುದೆಂಬ ಆಶಯ ಮೊದಲೇ ಇತ್ತು.ಆ ಕಾರಣದಿಂದ ಫಲಿತಾಂಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ.ಇದೀಗ ಆ ದಿನ ಬಂದಿದೆ.ನಾನು 625 ಅಂಕ ಪಡೆಯಬೇಕೆಂದು ಸತತ ಒಂದು ವರ್ಷದಿಂದ ನಿರಂತರವಾಗಿ ಪರಿಶ್ರಮಪಡುತ್ತಿದ್ದೆ.ಇದು ನನ್ನ ಪಾಲಿಗೆ ಕೇವಲ ಓದಾಗಿರಲಿಲ್ಲ ಬದಲಾಗಿ ಅದು ನನ್ನ ಪ್ರಾರ್ಥನೆಯಾಗಿತ್ತು. 625 ಅಂಕ ತೆಗೆಯಲೇಬೇಕೆಂಬ ಹಠ ನನ್ನಲ್ಲಿತ್ತು.ಅದಕ್ಕಾಗಿ ಕಠಿಣ ಅಭ್ಯಾಸ ಮಾಡಿದ್ದೇನೆ. ಇದು ಕೇವಲ ನನ್ನ ಸಾಧನೆ ಮಾತ್ರವಲ್ಲ ಇದು ಅಪ್ಪ ಅಮ್ಮನ ಪ್ರೋತ್ಸಾಹ ವಿದ್ಯಾಸಂಸ್ಥೆಯ ಶಿಕ್ಷಕರ ಅಪ್ರತಿಮ ಸಹಕಾರದ ಫಲ. ಮುಂದೆ ಎಂಬಿಬಿಎಸ್ ಅಧ್ಯಾಯನ ಮಾಡಿ ವೈದ್ಯೆಯಾಗುವ ಹಂಬಲ ಹೊಂದಿದ್ದೇನೆ.ವೈದ್ಯೆಯಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವ ಆಸೆ ಹೊಂದಿದ್ದೇನೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!