Ad Widget

ಅಧಿಕಾರಿಗಳು ಕಣ್ಣು ಬಿಟ್ಟು ಕೆಲಸ ಮಾಡಬೇಕು – ಸಚಿವ ಅಂಗಾರ ಎಚ್ಚರಿಕೆ – ಸರ್ವೆ ಕುರಿತು ಪರಿಹಾರ ಕಷ್ಟವೆಂದೂ ಬಿಂಬಿಸುವಂತಿದ್ದ ಅಧಿಕಾರಿಗಳ ಮಾತು

ಸುಳ್ಯ: ಅಧಿಕಾರಿಗಳು ಸರ್ವೆ ಮಾಡುವ ಸಂದರ್ಭ ಕಣ್ಣುಮುಚ್ಚಿಕೊಂಡು ಇರಬಾರದು. ಕಣ್ಣು ತೆರೆದು ನೈಜ ಸಮಸ್ಯೆಯ ಕುರಿತು ಪರಿಹಾರ ದೊರಕಿಸಲು ಪ್ರಯತ್ನಿಸಬೇಕು.
ಜನರ ಸರ್ವೆ ಕುರಿತ ಸಮಸ್ಯೆಗಳನ್ನು ಆದಷ್ಟು ತಾಲೂಕು ಮಟ್ಟದಲ್ಲೇ ಪತ್ತೆಹಚ್ಚಿ ಪರಿಹಾರದೊರಕಿಸಿಕೊಡಬೇಕು ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.
ಸುಳ್ಯ ತಾ.ಪಂ. ಸಭೆಯಲ್ಲಿ ತಾಲೂಕಿನ ಸರ್ವೆಯಲ್ಲಿನ ಸಮಸ್ಯೆಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನರಿಗೆ ಸಮಸ್ಯೆ ಪರಿಹಾರವಾಗುವುದೇ ನಮಗೆ ಮುಖ್ಯ. ಇದರಲ್ಲಿನ ತಾಂತ್ರಿಕ ದೋಷದ ಪರಿಹಾರದ ಕುರಿತು ಅಧಿಕಾರಿಗಳೇ ಪರಿಹಾರ ಕಂಡುಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ದ.ಕ. ಕ್ಕೆ ಸೀಮಿತವಾಗಿ ಏಕ ವ್ಯಕ್ತಿ ಅರ್ಜಿಯನ್ನು ಪರಿಗಣಿಸುವಂತೆ ಮಾಡಲು ಈಗಿನ ಕಂದಾಯ ಸಚಿವರು ಹಾಗೂ ಮುಖ್ಯಕಾರ್ಯದರ್ಶಿ ಅವರಲ್ಲಿ ಮನವರಿಕೆ ಮಾಡಿಕೊಡಲಾಗುವುದು. ಇಲ್ಲಿನ ಅಧಿಕಾರಿಗಳು ಇಲ್ಲಿನ ಸಮಸ್ಯೆಗಳ ಕುರಿತು ಆಗ ಸ್ಪಷ್ಟ ಮಾಹಿತಿ ನೀಡಬೇಕು ಎಂದರು.
ಎಸಿ ಯತೀಶ್ ಉಲ್ಲಾಳ್ ಮಾತನಾಡಿ ಸುಳ್ಯದ ಹಲವು ಗ್ರಾಮಾಂತರಗಳಲ್ಲಿ ಪ್ಲಾಟಿಂಗ್ ಅಗದಿರುವ ಹಲವು ಪ್ರಕರಣಗಳಿದ್ದು ಅದನ್ನು ತಾಲೂಕು ಮಟ್ಟದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಜನರ ಸಮಸ್ಯೆಗೆ ಪರಿಹಾರವೇ ನಮಗೆ ಅಂತಿಮ ಎಂದು ಸಚಿವರು ಎಷ್ಟೇ ಹೇಳಿದರೂ ಅಧಿಕಾರಿಳು ಮಾತ್ರ ತಾಲೂಕಿನ ಸರ್ವೇ ಸಮಸ್ಯೆಗೆ ಪರಿಹಾರವೇ ಇಲ್ಲ ಎಂಬಂತೇ ಕಾರಣ ನೀಡುತ್ತಾ ಕಾಲ ಕಳೆದದ್ದು ಸಭೆಯ ಉದ್ದಕ್ಕೂ ಕಂಡುಬಂತು.

ಹರೀಶ್ ಕಂಜಿಪಿಲಿ ಆಕ್ರೋಶ: ಕಂದಾಯ ಅಧಿಕಾರಿ ವೆಂಕಟೇಶ ಅವರು ತಾಲೂಕಿನಲ್ಲಿ ಪ್ಲಾಟಿಂಗ್ ಆಗದಿರುವ ಬೆರಳೆಣಿಕೆಯ ಪ್ರಕರಣಗಳು ಮಾತ್ರ ಇದೆ ಎಂದು ಸಭೆಗೆ ಮಾಹಿತಿ ನೀಡಿದ ಸಂದರ್ಭ ಹರೀಶ್ ಕಂಜಿಪಿಲಿ ಮಾತನಾಡಿ ತಾಲೂಕಿನಲ್ಲಿ ಬಹುತೇಕ ಕಡೆ ಪ್ಲಾಟಿಂಗ್ ಮಾಡಿಯೇ ಇಲ್ಲ. ಜನ ಸಾಮಾನ್ಯ ಅರ್ಜಿ ನೀಡಿದೃ ೫ ಬಗೆಯ ಪರಿಶೀಲನೆ ಆಗಬೇಕು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿ ಫೈಲ್ ಮೂ ಮಾಡುವುದಿಲ್ಲ. ಅತ್ತ ೫ ಪರಿಶೀಲನೆಗೆ ಒಳಪಡಿಸಲು ಜನರು ಮುಂದಾದಾಗ ಅದಕ್ಕೂ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಜನರಿಗೆ ಅಧಿಕಾರಿಗಳ ಸಮಜಾಯಿಷಿ ಬೇಕಾಗಿಲ್ಲ. ಅವರಿಗೆ ಸರ್ವೆ ಕಾರ್ಯ ಸರಿಯಾಗಬೇಕು. ಅಧಿಕಾರಿಗಳು ಈ ಕುರಿತು ಕಾರ್ಯ ಪ್ರವೃತ್ತರಾಗಬೇಕು ಎಂದರು.
ನ.ಪಂ.ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾತನಾಡಿ ದರ್ಖಾಸ್ತು ಮಂಜೂರಾತಿಗೆ ನಗರದ ಹಲವರು ಅರ್ಜಿ ಸಲ್ಲಿಸಿದರೂ ವಿವಿಧ ಕಾರಣ ನೀಡಿ ಅದನ್ನು ತಿರಸ್ಕರಿಸಲಾಗುತ್ತಿದೆ. ನಗರದಲ್ಲಿ ಒಂದು ತಿಂಗಳ ಹಿಂದೆ ಪ್ಲಾಟಿಂಗ್ ಆಗುತ್ತಿತ್ತು. ಆದರೆ ಈಗ ವನ್ ಟು ಫೈ ಪರಿಶೀಲನೆ ಆಗಬೇಕು ಎಂದು ಹೇಳುತ್ತಿದ್ದಾರೆ ಎಂದರು.

ಈ ಸಂದರ್ಭ ಜಿಲ್ಲಾ ಡಿಡಿಎಲ್ ಆರ್, ತಹಶೀಲ್ದಾರ್ ಅನಿತಾಲಕ್ಷ್ಮಿ, ಇಒ ಭವಾನಿಶಂಕರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!