Ad Widget

ರೈಲಿನಡಿಗೆ ಬಿದ್ದು ಎಡಮಂಗಲದ ಯುವಕ ಮೃತ್ಯು

ಎಡಮಂಗಲದಲ್ಲಿ ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಎಡಮಂಗಲ ಗ್ರಾಮದ ಪಟ್ಲದಮೂಲೆ ನಿವಾಸಿ ಭರತ್ (24) ಮೃತಪಟ್ಟ ದುರ್ದೈವಿ.
ಎಡಮಂಗಲದ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರರಾಗಿರುವ ಭರತ್ ಕೂಲಿ ಕೆಲಸಕ್ಕೆ ಹೋಗುವವರಾಗಿದ್ದು, ಸಂಜೆ ಎಡಮಂಗಲದಲ್ಲಿರುವ ಟೈಲರ್ ಶಾಪ್ ಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಅಡಿಗೆ ಬಿದ್ದು ಮೃತಪಟ್ಟರೆನ್ನಲಾಗಿದೆ. ಇವರು ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!