ಸುಳ್ಯ: ಲಯನ್ಸ್ ಕ್ಲಬ್ ಸುಳ್ಯ ಮತ್ತು ಚಿರಂತನ ಕ್ಲಿನಿಕ್ ಪೆರಾಜೆ ಇವರ ಜಂಟಿ ಆಶ್ರಯದಲ್ಲಿ ಇಮಾಮಿ ಲಿಮಿಟೆಡ್‌ರವರ ಪ್ರಾಯೋಜಕತ್ವದೊಂದಿಗೆ ಉಚಿತ ರಕ್ತದೊತ್ತಡ, ಮಧುಮೇಹ ಮತ್ತು ಮೂಳೆ ಖನಿಜಾಂಶ ಸಾಂದ್ರತೆಯ ತಪಾಸಣಾ ಶಿಬಿರವು ಪೆರಾಜೆಯ ಚಿರಂತನ ಕ್ಲಿನಿಕ್‌ನಲ್ಲಿ ನಡೆಯಿತು. ಈ ಉಚಿತ ಆರೋಗ್ಯ ಶಿಬಿರವನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಆನಂದ ಪೂಜಾರಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯದರ್ಶಿ ರಮಿತಾ ಜಯರಾಮ ನಡೆದ ಈ ಆರೋಗ್ಯ ಶಿಬಿರದಲ್ಲಿ ಒಟ್ಟು 97 ಮಂದಿ ಮೂಳೆ ಖನಿಜಾಂಶ ಸಾಂದ್ರತೆಯ ತಪಾಸಣೆ, 84 ಮಂದಿ ಮಧುಮೇಹ ಮತ್ತು 104 ಮಂದಿ ರಕ್ತದೊತ್ತಡ ತಪಾಸಣೆಗೊಳಪಟ್ಟು ನುರಿತ ವೈದ್ಯರುಗಳಿಂದ ಉಚಿತ ಸಲಹೆ ಪಡೆದರು.
ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ರಮಿತಾ ಜಯರಾಮ , ಚಿರಂತನ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಲಕ್ಷೀಶ್ ಕೆ ಎಸ್, ಲಯನ್ಸ್ ಪ್ರಾಂತೀಯ ಗ್ಯಾಟ್ ಸಂಯೋಜಕರಾದ ಜಯಪ್ರಕಾಶ್ ರೈ, ಲಯನ್ಸ್ ಖಜಾಂಜಿ ಎಂ ರಾಮಚಂದ್ರ, ಪ್ರೊ ಎಂ ಬಾಲಚಂದ್ರ ಗೌಡ, ರಾಧಾಕೃಷ್ಣ ಮಾಣಿಬೆಟ್ಟು, ಡಿ ಎಸ್ ಗಿರೀಶ್, ಕರುಂಬಯ್ಯ, ರಾಮಕೃಷ್ಣ ರೈ ಮತ್ತು ದೇವಿಪ್ರಸಾದ್ ಕುದ್ಪಾಜೆ ಮತ್ತಿತರರು ಉಪಸ್ಥಿತರಿದ್ದರು.