ಜುಲೈ ೨೦ ರವರೆಗೆ ಇಳಿಮುಖವಾಗಿದ್ದ ಕೊರೊನಾ ಸುಳ್ಯ ತಾಲೂಕಿನಾದ್ಯಂತ ಮತ್ತೆ ಏರಿಕೆ ಕಂಡಿದ್ದು ತಾಲೂಕು ಆಡಳಿತ, ಪೋಲೀಸ್ ಇಲಾಖೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವೇ ಮತ್ತೊಮ್ಮೆ ವಾರಾಂತ್ಯ ಕರ್ಫ್ಯೂ, ಲಾಕ್ ಡೌನ್ ಗೆ ಜನ ಸಜ್ಜಾಗಬೇಕು ಎಂಬ ವಿಶ್ಲೇಷಣೆಗಳು ಮೇಲ್ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 10ರಂದು162 ಸಕ್ರೀಯ ಪ್ರಕರಣಗಳಿದ್ದವು. ಆ ಸಂಖ್ಯೆ ಆ. 5 ರ ವೇಳೆಗೆ 417 ಕ್ಕೆ ಏರಿಕೆಯಾಗಿದೆ.
ಸುಳ್ಯ ತಾಲೂಕಿನ ೪ ಕಡೆಗಳಲ್ಲಿ ಈಗಾಗಲೇ ಚೆಕ್ಪೋಸ್ಟ್ ನಿರ್ಮಾಣ ಮಾಡಿ ತಪಾಸಣೆ ಮಾಡಲಾಗುತ್ತಿದೆ. 72ಗಂಟೆಗಳ ಹಿಂದಿನ ನೆಗೆಟಿವ್ ವರದಿ ಹಾಗೂ ಕೋವಿಡ್ ಮೊದಲ ಲಸಿಕೆ ಪಡೆದವರನ್ನು ಮಾತ್ರ ಸುಳ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ಎರಡನೇ ಅಲೆಯ ಸಂದರ್ಭ ಮಾಡುತ್ತಿದ್ದ ಆರ್.ಟಿ.ಪಿ.ಸಿ.ಆರ್ ಟೆಸ್ಟ್, ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಿತರ ತಪಾಸಣೆಯನ್ನು ಯಥಾವತ್ತಾಗಿ ಮಾಡಲಾಗುತ್ತಿದೆಯಾದರೂ ಕೇರಳದಿಂದ ಒಳ ದಾರಿಗಳ ಮೂಲಕ ತಾಲೂಕಿಗೆ ಪ್ರವೇಶಿಸುವವರ ಪ್ರಮಾಣ ಜಾಸ್ತಿಯಾಗಿದೆ
ಕೊರೊನಾ ಸೋಂಕಿಗೆ ತುತ್ತಾದವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗುತ್ತಿದೆ. ತೀರಾ ಕಷ್ಟ ಆಗುವವರಿಗೆ ಹಾಗೂನೆಯಲ್ಲಿ ಎಲ್ಲ ವ್ಯವಸ್ಥೆ ಇರುವವರಿಗೆ ಮನೆಯಲ್ಲೇ ಇರಲು ಅವಕಾಶ ಮಾಡಿಕೊಡಲಾಗುತ್ತಿದೆ.
“ತಾಲೂಕಿನಾದ್ಯಂತ ಕೊರೊನಾ ನಿಧಾನವಾಗಿ ಏರಿಕೆಯಾಗುತ್ತಿದ್ದು ತಾಲೂಕು ಆಡಳಿತದಿಂದ ನಿಯಂತ್ರಣ ಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಹಾಗೂ ಇತರ ಕಡೆಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳುತ್ತೇವೆ” ಎಂದು ತಹಶಿಲ್ದಾರ್ ಅನಿತಾಲಕ್ಷ್ಮಿ ತಿಳಿಸಿದ್ದಾರೆ.