
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರುವಿನಲ್ಲಿ ಕೊರಗಜ್ಜ ಎಂಬ ಹೆಸರಿನ ನೂತನ ಪ್ರಗತಿಬಂಧು ಸಂಘವು ಆಲ್ಕಬೆ ಚೆನ್ನಪ್ಪ ಗೌಡರ ಮನೆಯಲ್ಲಿ ಜೂ.24ರಂದು ಉದ್ಘಾಟನೆಗೊಂಡಿತು.
ಸಂಘದ ಉದ್ಘಾಟನೆಯನ್ನು ಪುಷ್ಪಾವತಿ ಆಲ್ಕಬೆ ಅವರು ನೆರವೇರಿಸಿದರು.
ಪ್ರಾಸ್ತಾವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಅವರು ಮಾತನಾಡಿದರು.
ಸಂಘಗಳ ವ್ಯವಹಾರಗಳ ಬಗ್ಗೆ ಯೋಜನಾಧಿಕಾರಿಗಳಾದ ಚೆನ್ನಕೇಶವ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಜನಾರ್ಧನ ದೋಣಿಪಳ್ಳ, ಕುಶಾಲಪ್ಪ ಜಾಲುಮನೆ, ಕೇಶವ ಕೊಂದಾಳ, ಮೋನಪ್ಪ ತುಪ್ಪಟ, ತೀರ್ಥರಾಮ ದೋಣಿಪಳ್ಳ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸಾವಿತ್ರಿ ವಂದಿಸಿದರು.
✍ವರದಿ :- ಉಲ್ಲಾಸ್ ಕಜ್ಜೋಡಿ