ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲಿನ ಮಹಿಳೆಯೊಬ್ಬರಿಗೆ ನಾಗರಹಾವು ಕಚ್ಚಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲು ಎಂಬಲ್ಲಿನ ಚಂದ್ರಾವತಿ ಎಂಬುವವರು ಜೂ.19ರಂದು ಮನೆಯ ಸಮೀಪ ನಾಗರಹಾವು ಕಚ್ಚಿದ್ದು, ಪರಿಣಾಮ ಮಹಿಳೆ ಸ್ಮೃತಿ ತಪ್ಪಿದ್ದು ತಕ್ಷಣವೇ ಮನೆಯವರು ಮಹಿಳೆಯನ್ನು ಕೊಲ್ಲಮೊಗ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಸ್ಪತ್ರೆಯವರು ತಿಳಿಸಿದರು. ಆ ವೇಳೆಗೆ ಕೊಲ್ಲಮೊಗ್ರದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಇತ್ತೀಚೆಗೆ ನೀಡಿದ ಅಂಬ್ಯುಲೆನ್ಸ್ (ಸೇವಾಭಾರತಿ) ವಾಹನದಲ್ಲಿ ಮಹಿಳೆಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ 30 ನಿಮಿಷದಲ್ಲಿ ತಲುಪಿಸಲಾಯಿತು. ಮಹಿಳೆಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
*✍ವರದಿ :- ಉಲ್ಲಾಸ್ ಕಜ್ಜೋಡಿ*