
ಗುತ್ತಿಗಾರು ಕಮಿಲ ರಸ್ತೆಯ ಚತ್ರಪ್ಪಾಡಿ ಬಳಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಂತು ಕೆಸರುಮಯವಾಗಿತ್ತು. ರಸ್ತೆ ಬದಿಯ ಚರಂಡಿಯನ್ನು ಸ್ಥಳೀಯ ಯುವಕರು ಸೇರಿ ದುರಸ್ತಿಗೊಳಿಸಿದರು. ರವೀಂದ್ರ ಆಜಡ್ಕ, ನಿಶ್ಚಿತ್ ರಾಂ ತುಪ್ಪದಮನೆ, ಅಜಯ್ ಸಂಪ್ಯಾಡಿ, ಶ್ರವಣ್ ಸಂಪ್ಯಾಡಿ, ಶ್ರೇಯಸ್ ಸಂಪ್ಯಾಡಿ ಶ್ರಮದಾನ ನಡೆಸಿ ಸಾಮಾಜಿಕ ಕಳಕಳಿ ಮೆರೆದರು.
