Ad Widget

ಬದುಕಿನಲಿ ನಗುವಿರಲಿ

ನಿನ್ನಯ ಶಕ್ತಿಯ ಪರಿಚಯ ಮಾಡಿಸು, ಸೋಲಲೆಬೇಡ ನೀನ್ಯಾರಿಗೂ…
ನಿನ್ನನ್ನು ದ್ವೇಷಿಸೋ ಮನುಜರೆಲ್ಲರೂ ಪ್ರೀತಿಸುವಂತೆ ನೀ ಬದುಕು…
ಬದುಕಲಿ ಬರುವ ಸೋಲು-ಗೆಲುವುಗಳ ಬಂದಂತೆಯೇ ನೀ ಸ್ವೀಕರಿಸು…
ಅಹಂಕಾರ, ಮದ-ಮತ್ಸರಗಳನು ಬಿಟ್ಟು ಬಾಳು ನೀ ಬದುಕಿನಲಿ…
ನಿನ್ನಯ ಬದುಕು ಸ್ಪೂರ್ತಿಯಾಗಲಿ ಮುಂದಿನ ತಲೆ-ತಲೆಮಾರಿಗೂ…

. . . . . . . . .

ಮನಸಲಿ ಸಾವಿರ ನೋವುಗಳಿದ್ದರೂ ನಗು-ನಗುತಿರು ನೀ ಪ್ರತಿನಿಮಿಷ…
ನಿನ್ನಯ ನಗುವನು ನೋಡಿ ಖುಷಿಪಡುವ ಜನರೂ ಇಹರು ಈ ಜಗದಿ…
ಜೀವನವೆಂಬ ಯುದ್ದದಲ್ಲಿ ಗೆಲುವೇ ಮುಖ್ಯ ಎನ್ನದಿರು…
ಗೆಲುವನು ಸೋಲಿಸೊ ಆಯುಧವಿಹುದು, ಆ ಆಯುಧವೇ ನಿನ್ನ ನಗು…
ನಗುವಿಗಿಂತ ದೊಡ್ಡ ಗೆಲುವು ಇಲ್ಲ, ಅಳುವಿಗಿಂತ ದೊಡ್ಡ ಸೋಲು ಇಲ್ಲ ಈ ಬದುಕಿನಲಿ…

. . . . . . .

ಬದುಕಿನ ಯುದ್ದದ ಪ್ರತಿದಿನ ಪ್ರತಿಕ್ಷಣ ಎಚ್ಚರದಿಂದ ನೀನಿರು…
ಕಷ್ಟ-ನಷ್ಟಗಳ ಹಾದಿಯು ಬದುಕು ನಗು-ನಗುತಾ ಸಾಗುತಿರು…
ಸೋಲಿಗೆ ಹೆದರದೆ, ಗೆಲುವಿಗೆ ಬೀಗದೆ ಯಾರಿಗೂ ಹೆದರದೆ ನೀ ಬದುಕು…
ಕಲ್ಲು-ಮುಳ್ಳುಗಳ ಹಾದಿಯು ಜೀವನ ಸಹಿಸಿಕೊಂಡು ನೀ ಮುಂದೆ ಸಾಗು…
ಸಹಿಸಿಕೊಂಡು ಸಾಗಿದರೆ ನೀ ಗೆದ್ದೆ ಗೆಲ್ಲುವೆ ಬದುಕಿನಲಿ…

ನಿನ್ನ ಜೀವನದ ಸ್ವಲ್ಪ ಪಾಲುಗಳ ಇತರರಿಗಾಗಿ ಮೀಸಲಿಡು…
ಮಾನವೀಯ ಮೌಲ್ಯಗಳನ್ನು ನಿನ್ನ ಬದುಕಲಿ ನೀ ಅಳವಡಿಸು…
ನಿನ್ನನ್ನು ದ್ವೇಷಿಸೋ ಮನುಜರೆಲ್ಲರೂ ಪ್ರೀತಿಸುವಂತೆ ನೀ ಬದುಕು…
ನೋವನು ಮರೆತು ಈ ಜಗದಲ್ಲಿ ಖುಷಿ-ಖುಷಿಯಿಂದ ನೀ ಬದುಕು…
ಈ ಬದುಕಿನಲಿ ಪ್ರತಿದಿನ-ಪ್ರತಿಕ್ಷಣ ನಗು-ನಗುತಲಿ ನೀ ಬದುಕು…

ನಿನ್ನಯ ಶಕ್ತಿಯ ಪರಿಚಯ ಮಾಡಿಸು, ಸೋಲಲೆಬೇಡ ನಿನ್ಯಾರಿಗೂ…
ಮನಸಲಿ ಸಾವಿರ ನೋವುಗಳಿದ್ದರೂ ನಗು-ನಗುತಿರು ನೀ ಪ್ರತಿನಿಮಿಷ…
ನಿನ್ನನ್ನು ದ್ವೇಷಿಸೋ ಮನುಜರೆಲ್ಲರೂ ಪ್ರೀತಿಸುವಂತೆ ನೀ ಬದುಕು…
ಸೋಲಿಗೆ ಹೆದರದೆ, ಗೆಲುವಿಗೆ ಬೀಗದೆ ಯಾರಿಗೂ ಹೆದರದೆ ನೀ ಬದುಕು…
ನೀ ಸತ್ತ ನಂತರವೂ ನಿನ್ನಯ ಹೆಸರು ಈ ಜಗದಲ್ಲಿ ನೆಲೆಸಿರಲಿ…

✍ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading