ಕೊಲ್ಲಮೊಗ್ರ ಶಿವತೀರ್ಥ ದೊಡ್ಡಣ್ಣ ಶೆಟ್ಟಿ ಕೆರೆಯಲ್ಲಿ ನೀರು ತುಂಬಿದ್ದು, ಕೆರೆಯ ಏರಿಯ ಮಟ್ಟ ಅಪಾಯದಲ್ಲಿತ್ತು. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜೂ.15 ರಂದು ಪೈಪು ಅಳವಡಿಕೆ ಮಾಡಿ ನೀರನ್ನು ಹೊರಬಿಡುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಸಿಮೆಂಟ್ ಪೈಪುಗಳನ್ನು ಕಮಲಾಕ್ಷ ಮುಳ್ಳುಬಾಗಿಲು, ಶ್ರೀನಿವಾಸ್ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಾಧವ ಚಾಂತಾಳ ಅವರು ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಮಣಿಕಂಠ ಕಟ್ಟ, ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಬಾಲಸುಬ್ರಹ್ಮಣ್ಯ, ಲಕ್ಷ್ಮಣ ಐನೆಕಿದು, ಕುಶಾಲಪ್ಪ ಜಾಲುಮನೆ, ಚಂದ್ರಶೇಖರ ಕೋನಡ್ಕ, ಮುತ್ತಪ್ಪ ಕಟ್ಟ, ಹರ್ಷ ಅಡ್ನೂರು ಮಜಲು, ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಾಧವ ಚಾಂತಾಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
✍ವರದಿ :- ಉಲ್ಲಾಸ್ ಕಜ್ಜೋಡಿ