ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ ಸುಳ್ಯದ ಪೈಚಾರಿನ ಪೆಟ್ರೋಲ್ ಬಂಕ್ ನಲ್ಲಿ ನಡೆಯಿತು.
ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಪ್ರಾಸ್ತಾವಿಕವಾಗಿ ಮಾತನಾಡಿ “ಮುಂಬರುವ ದಿನಗಳಲ್ಲಿ ಶಾಲಾ-ಕಾಲೇಜು ಪ್ರಾರಂಭವಾದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದೆ ರೀತಿ ಇದ್ದರೆ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗಲಿದೆ. ಸಾರಿಗೆ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಅನಿವಾರ್ಯದಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಬೈಕನ್ನು ಬಳಸುತ್ತಾರೆ. ಹೀಗಿರುವಾಗ ಸರಕಾರ ಪೆಟ್ರೋಲ್,ಡೀಸೆಲ್ ಬೆಲೆಯೇರಿಕೆ ಮಾಡಿ ವಿದ್ಯಾರ್ಥಿಗಳ ಮೇಲೆ ಬಾರ ಹಾಕಿದಂತಾಗಿದೆ. ಆದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೀಘ್ರ ಇಳಿಸಬೇಕೆಂದು ಒತ್ತಾಯಿಸಿದರು”.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ ಅವರು ಕೇಕ್ ಕತ್ತರಿಸಿದರು, ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಟಿ. ಎಂ ಶಾಹೀದ್ ರವರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಪಿ.ಎಸ್ ಗಂಗಾಧರ, ಶಶಿಧರ್ ಎಂ.ಜೆ, ಸುರೇಶ್ ಎಂ.ಹೆಚ್, ಶ್ರೀಹರಿ ಕುಕ್ಕುಡೇಲು, ರಾಜಾರಾಂ ಭಟ್, ಷರೀಫ್ ಕಂಟಿ, ಶಾಹುಲ್ ಹಮೀದ್, ಶಾಪಿ ಕುತ್ತಮೊಟ್ಟೆ , ಸವಾದ್ ಗೂನಡ್ಕ, ಗೋಕುಲ್ ದಾಸ್, ಮಹಮದ್ ಕುಞಿ ಗೂನಡ್ಕ, ನಂದರಾಜ ಸಂಕೇಶ, ಧನುಷ್ ಕುಕ್ಕೇಟಿ, ಶಾಹಾಲ್ ಕೆ.ಎಸ್, ಸಂಪತ್ ಕುಮಾರ್ ಮಡಪ್ಪಾಡಿ ಉಪಸ್ಥಿತರಿದ್ದರು. ಪವನ್ ಅಂಬೆಕಲ್ಲು ಸ್ವಾಗತಿಸಿ, ಆಶಿಕ್ ಅರಂತೋಡು ವಂದಿಸಿದರು.