
ದೇವಚಳ್ಳ ಗ್ರಾಮದ ದೇವ ಕನ್ನಡಕಜೆ ಚಿನ್ನಪ್ಪ ಹಾಗೂ ಪ್ರೇಮರವರ ಏಕೈಕ ಪುತ್ರ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾದ ಘಟನೆ ಇಂದು ನಡೆದಿದೆ.
ಕಳೆದ 5 ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಉಲ್ಬಣಿಸಿ ಇಂದು ನಿಧನರಾದರೆಂದು ತಿಳಿದುಬಂದಿದೆ.ಇವರು ಸುಬ್ರಹ್ಮಣ್ಯ ದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು. ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿರುವುದು ಹಾಗೂ ಯುವ ಜನತೆ ಬಲಿಯಾಗುತ್ತಿರುವ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ.