
ಸುಳ್ಯ ಶಾಂತಿನಗರ ನಿವಾಸಿ ಸುಳ್ಯ ಮೆಸ್ಕಾಂ ಉದ್ಯೋಗಿ ನಾಗೇಶ್ ಅವರ ಪುತ್ರ ಪ್ರಮೋದ್ (21) ಡೆಂಗ್ಯೂ ಜ್ವರಕ್ಕೆ ಬಲಿಯಾದ ದುರ್ದೈವಿ. ಕೆಲ ದಿನಗಳ ಹಿಂದೆ ಜ್ವರ ಕಂಡುಬಂದು ಡೆಂಗ್ಯೂ ಎಂದು ಗೊತ್ತಾಗುವ ವೇಳೆ ತೀವ್ರ ಅಸ್ವಸ್ಥರಾಗಿದ್ದರು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೂ. 12 ರಂದು ಮೃತರಾದರು. ಸುಳ್ಯದ ಎನ್ ಎಂ ಸಿ ಯಲ್ಲಿ ಅಂತಿಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಅವರು ತಂದೆ, ತಾಯಿ ಪುಷ್ಪಾವತಿ, ತಮ್ಮ ಕೌಶಿಕ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.