ಕೋವಿಡ್-19 ಹೊಡೆತಕ್ಕೆ ಇಡೀ ವಿಶ್ವವೇ ಪರಿತಪಿಸುತ್ತಿರುವಾಗ ರಾಜ್ಯದಲ್ಲಿ ಪಂಚಾಯತ್ ಅನುದಾನವನ್ನು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಹಿಂದೆಂದೂ ಕಾಣದ ಭೀಕರ ಸಾಂಕ್ರಾಮಿಕ ರೋಗದಿಂದ ಉಂಟಾದ ಸಂಕಷ್ಟದ ನಿರ್ವಹಣೆಗೆ ರಾಜ್ಯ ಸರಕಾರ ಸಾಕಷ್ಟು ಅನುದಾನವನ್ನು ನೀಡಿದೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸಮಾಜದ ಶ್ರಮಿಕ ವರ್ಗದ ಕಣ್ಣೀರೊರೆಸಲು ಸಾವಿರಾರು ಕೋಟಿಯ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತವಾಗಿ ನೀಡುತ್ತಿದ್ದ ಪಡಿತರದ ಪ್ರಮಾಣವನ್ನು ದುಪ್ಪಟ್ಟು ಮಾಡಲಾಗಿದೆ.
ಇಡೀ ಆದಾಯದ ಮೂಲಕ್ಕೆ ಕತ್ತರಿ ಬಿದ್ದರು ಯಡಿಯೂರಪ್ಪ ಸರಕಾರ ರಾಜ್ಯದ ಜನತೆಯ ನೋವಿಗೆ ಪಕ್ಷ ಭೇದ ಮರೆತು ಸ್ಪಂದಿಸಿದೆ. ಇಂತಹ ಸಂದರ್ಭದಲ್ಲಿ ಹದಿನೈದನೇ ಹಣಕಾಸು ಯೋಜನೆಯಲ್ಲಿ ಅಲ್ಪಮೊತ್ತವನ್ನು ಕಡಿತಗೊಳಿಸಿರುವುದರಿಂದ ಗ್ರಾಮದ ಅಭಿವೃದ್ಧಿಗೆ ಯಾವುದೇ ರೀತಿಯ ಅಡಚಣೆಯಾಗದು. ಜನತೆಯ ಜೀವ ರಕ್ಷಣೆಗೆ ಸರಕಾರ ಸಾಕಷ್ಟು ಹಣವನ್ನು ವ್ಯಯಿಸಿದೆ.
✍ಪದ್ಮನಾಭ ಶೆಟ್ಟಿ ಪೆರುವಾಜೆ
ಸದಸ್ಯರು, ಗ್ರಾಮ ಪಂಚಾಯತ್ ಪೆರುವಾಜೆ