
ಪಂಜ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೇರ್ ಸೆಂಟರ್ ಕಾರ್ಯಾರಂಭ ಮಾಡಿದ ದಿನದಿಂದಲೂ ವಿಲೇವಾರಿಯಾಗದೆ ಉಳಿದಿತ್ತು. ಈ ಎಲ್ಲಾ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗ್ರಾಮ ಪಂಚಾಯತ್ ಗುರುತಿಸಿದ ಸ್ಥಳದಲ್ಲಿ ಸೇವಾಭಾರತಿ ಸದಸ್ಯರ ಮುತುವರ್ಜಿಯಲ್ಲಿ ಹೊಂಡ ತೆಗೆದು ಸ್ವಯಂ ಸೇವಕರೇ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿದರು. ಕಸ ವಿಲೇವಾರಿ ಮಾಡಿದ ನಂತರ ಕೋವಿಡ್ ಕೇಂದ್ರದ ಆವರಣ ಹಾಗೂ ತ್ಯಾಜ್ಯ ಸಾಗಾಟ ಮಾಡಿದ ಪಂಚಾಯತ್ ವಾಹನವನ್ನು ಕೂಡಾ ಸೇವಾಭಾರತಿ ಸದಸ್ಯರು ಸ್ಯಾನಿಟೈಸ್ ಮಾಡಿದರು.