ಕೋವಿಡ್ ಸಂಕಷ್ಟದ ಸಮಯದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ನೆರವಿಗೆ ಬಂದಿರುವ ಕಾಂಗ್ರೆಸ್ ಇಂದು 117 ಮಂದಿಗೆ ಫುಡ್ ಕಿಟ್ ವಿತರಿಸಿದೆ. ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಮಡಿಕೇರಿ ರವರು 1, 500 ರೂ ಮೌಲ್ಯದ ಕಿಟ್ ಪ್ರಾಯೋಜಿಸಿದ್ದು, ಮಾಜಿ ಸಚಿವ ಬಿ.ರಮಾನಾಥ ರೈಯವರು ಕಿಟ್ ವಿತರಣೆ ನೀಡಿದರು. ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಇರುವ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಾಂಗ್ರೆಸ್ ಪ್ರಮುಖರಾದ ಡಾ.ಬಿ.ರಘು, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ನಂದಕುಮಾರ್ ಮಡಿಕೇರಿ, ಎನ್.ಜಯಪ್ರಕಾಶ್ ರೈ, ಪಿ.ಎಸ್.ಗಂಗಾಧರ್, ಟಿ.ಎಂ.ಶಹೀದ್, ಗೀತಾ ಕೋಲ್ಚಾರ್, ಎಸ್.ಸಂಶುದ್ದೀನ್, ಬಾಲಕೃಷ್ಣ ಭಟ್ ಕೊಡೆಂಕಿರಿ, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಕಳಂಜ ವಿಶ್ವನಾಥ ರೈ, ಸುರೇಶ್ ಎಂ.ಎಚ್., ಆನಂದ ಬೆಳ್ಳಾರೆ, ಶಶಿಧರ್ ಎಂ.ಜೆ., ಕೆ.ಗೋಕುಲ್ ದಾಸ್, ನಂದರಾಜ ಸಂಕೇಶ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಶಾಫಿ ಕುತ್ತಮೊಟ್ಟೆ, ರಫೀಕ್ ಪಡು, ಶಹೀದ್ ಪಾರೆ, ಭವಾನಿಶಂಕರ್ ಕಲ್ಮಡ್ಕ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಜಯರಾಮ್ ಭಟ್ ಬೆಟ್ಟ, ಸದಾನಂದ ಮಾವಜಿ, ಕೀರ್ತನ್ ಕೊಡಪಾಲ ಮತ್ತಿತರರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಉಪಸ್ಥಿತರಿದ್ದರು.
- Thursday
- November 21st, 2024